ಪಾಕಿಸ್ತಾನ ಗುರುದ್ವಾರದ ಮೇಲೆ ದಾಳಿ: ಭಾರತದ ತೀವ್ರ ಖಂಡನೆ, ಕ್ರಮಕ್ಕೆ ಆಗ್ರಹ

ಮತಾಂತರ ಮತ್ತು ಹಲ್ಲೆ ಆರೋಪದ ಮೇರೆಗೆ ಪಾಕಿಸ್ತಾನದ ಪಂಜಾಬ್ ನಲ್ಲಿರುವ ನನ್ಕಾನ್ ಗುರುದ್ವಾರದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಪಾಕಿಸ್ತಾನ ಗುರುದ್ವಾರದ ಮೇಲೆ ದಾಳಿ
ಪಾಕಿಸ್ತಾನ ಗುರುದ್ವಾರದ ಮೇಲೆ ದಾಳಿ

ನವದೆಹಲಿ: ಮತಾಂತರ ಮತ್ತು ಹಲ್ಲೆ ಆರೋಪದ ಮೇರೆಗೆ ಪಾಕಿಸ್ತಾನದ ಪಂಜಾಬ್ ನಲ್ಲಿರುವ ನನ್ಕಾನ್ ಗುರುದ್ವಾರದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತ ಸರ್ಕಾರ, 'ಸಿಖ್ ಸಮುದಾಯದ ಜನರ ಸುರಕ್ಷತೆ, ಭದ್ರತೆಗಾಗಿ ಪಾಕ್ ಸರಕಾರವು ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸಿದ್ದೇವೆ ಎಂದು ಹೇಳಿದೆ.

ಅಂತೆಯೇ ಈ ಕುರಿತಂತೆ ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು, ನನ್ಕಾನ್ ಗುರುದ್ವಾರದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಪವಿತ್ರ ಸ್ಥಳದ ಮೇಲಿನ ದಾಳಿ ಮತ್ತು ಅಪವಿತ್ರತೆ ಅಪೇಕ್ಷಣೀಯ ಮತ್ತು ಅಸಹನೀಯ. ಪಾಕಿಸ್ತಾನ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಪಾಕ್ ನಲ್ಲಿನ ಸಿಖ್ ಸಮುದಾಯದ ಸುರಕ್ಷತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಘಟನೆ?
ಮಹಮ್ಮದ್​ ಹಸ್ಸನ್​ ಎಂಬಾತನ ಸೋದರ ಗುರುದ್ವಾರದ ಮುಖ್ಯಸ್ಥನ ಮಗಳಾದ ಜಗ್ಜಿತ್​ ಕೌರ್​ ಎಂಬಾಕೆಯನ್ನು ಅಪಹರಿಸಿ ಮತಾಂತರ ಮಾಡಿದ್ದಾನೆ.  ಇದೇ ಕಾರಣಕ್ಕೆ ಗುರುದ್ವಾರದ ಮುಖ್ಯಸ್ಥರ ಕುಟುಂಬ ಮಹಮ್ಮದ್​ ಹಸ್ಸನ್ ಸಹೋದರನ ಮೇಲೆ ಹಲ್ಲೆ ಮಾಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಮುಸ್ಲಿಮರು ಏಕಾಏಕಿ ಗುಂಪುಸೇರಿ ಗುರುದ್ವಾರದ ಮೇಲೆ ದಾಳಿ ಮಾಡಿದ್ದಾರೆ. ಉದ್ರಿಕ್ತರು ಇಲ್ಲಿ ಗುರುದ್ವಾರ ಇರಲು ಬಿಡುವುದಿಲ್ಲ. ಇದನ್ನು ಧ್ವಂಸ ಮಾಡಬೇಕು ಎಂದು ಕೂಗುತ್ತಿದ್ದಾರೆ. ಅಲ್ಲದೆ ಈ ಸ್ಥಳದ ನನಕಾನಾ ಸಾಹಿಬ್​ ಎಂಬ ಹೆಸರನ್ನು ತೆಗೆದು ಅದಕ್ಕೆ ಗುಲಾಮ್​ ಎ ಮುಸ್ತಾಫ್​ ಎಂದು ಹೆಸರಿಡುತ್ತೇವೆ. ನನಕಾನಾದಲ್ಲಿನ್ನು ಸಿಖ್ಖರು ಇರುವಂತಿಲ್ಲ” ಎಂಬ ಘೋಷಣೆ ಕೂಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com