ಪೊಲೀಸರಿಂದ ಕಾರು ವಾಪಸ್ ಪಡೆಯಲು ದಾಖಲೆಯ ದಂಡ ಪಾವತಿ: ದೇಶದಲ್ಲೇ ಮೊದಲು!  

ಪೋರ್ಷೆ 911 ಸ್ಪೋರ್ಟ್ಸ್ ಕಾರಿನ ಮಾಲಿಕ ತನ್ನ ಕಾರನ್ನು ಪೊಲೀಸರಿಂದ ವಾಪಸ್ ಪಡೆಯಲು ಮಾಲಿಕ ಬರೊಬ್ಬರಿ 27.68 ಲಕ್ಷ ರೂಪಾಯಿ ಪಾವತಿ ಮಾಡಿದ್ದಾನೆ. 

Published: 09th January 2020 04:48 PM  |   Last Updated: 09th January 2020 04:48 PM   |  A+A-


Porsche owner pays Rs 27.68 lakh to get back his impounded luxury car from Ahmedabad traffic cops

ಪೊಲೀಸರಿಂದ ಕಾರು ವಾಪಸ್ ಪಡೆಯಲು ದಾಖಲೆಯ ದಂಡ ಪಾವತಿ: ದೇಶದಲ್ಲೇ ಮೊದಲು!

Posted By : Srinivas Rao BV
Source : Online Desk

ಪೋರ್ಷೆ 911 ಸ್ಪೋರ್ಟ್ಸ್ ಕಾರಿನ ಮಾಲಿಕ ತನ್ನ ಕಾರನ್ನು ಪೊಲೀಸರಿಂದ ವಾಪಸ್ ಪಡೆಯಲು ಮಾಲಿಕ ಬರೊಬ್ಬರಿ 27.68 ಲಕ್ಷ ರೂಪಾಯಿ ಪಾವತಿ ಮಾಡಿದ್ದಾನೆ. 

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು,ರಂಜಿತ್ ದೇಸಾಯಿ ಎಂಬುವವರು ಆಮದು ಮಾಡಿಕೊಂಡಿದ್ದ 2 ಕೋಟಿ ರೂಪಾಯಿ ಮೌಲ್ಯದ ಪೋರ್ಷೆ ಕಾರಿಗೆ ಕಟ್ಟಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳದೇ 2017 ರಿಂದ ನೋಂದಣಿಯನ್ನೂ ಮಾಡಿಸದೇ ಬಳಸುತ್ತಿದ್ದರು. 

ಅಹ್ಮದಾಬಾದ್ ನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ತೆರಿಗೆ ಪಾವತಿಸಿ, ನಗರ ಟ್ರಾಫಿಕ್ ಪೊಲೀಸರ ವಶದಲ್ಲಿದ್ದ ಕಾರನ್ನು ವಾಪಸ್ ಪಡೆಯಲಾಗಿದೆ. 

ಪೋರ್ಷೆ ಕಾರಿಗೆ ವಿಧಿಸಲಾದ ದಂಡ ದೇಶದಲ್ಲೇ ಮೊದಲ ಬಾರಿಗೆ ವಿಧಿಸಲಾಗಿರುವ ಅತಿ ಹೆಚ್ಚಿನ ಮೊತ್ತದ ದಂಡವಾಗಿದೆ ಎಂದು ಟ್ರಾಫಿಕ್ ಪೊಲೀಸ್ ಟ್ವೀಟ್ ಮಾಡಿದ್ದಾರೆ. 

ದುಬಾರಿ ಕಾರಿನ ಮಾಲಿಕ 16 ಲಕ್ಷ ಮೋಟಾರು ವಾಹನ ತೆರಿಗೆ ಪಾವತಿ ಮಾಡಬೇಕಿತ್ತು, ಜೊತೆಗೆ 7.68 ಲಕ್ಷ ರೂಪಾಯಿ ತೆರಿಗೆ ಕಟ್ಟದೇ ಇರುವುದಕ್ಕೆ ವಿಧಿಸಿದ ಬಡ್ಡಿ ಮೊತ್ತ, 4 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp