ಕೋಲ್ಕತ್ತಾದಲ್ಲಿ ಎರಡನೇ ದಿನ ಪ್ರಧಾನಿ ಮೋದಿ: ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದ ಸ್ಮರಿಸಿದ ಪ್ರಧಾನಿ ಮೋದಿ 

ತಮ್ಮ ಎರಡನೇ ದಿನದ ಕೋಲ್ಕತ್ತಾ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಬೇಲೂರು ಮಠಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದರು.
ಬೇಲೂರು ಮಠದಲ್ಲಿ ಸ್ವಾಮಿಗಳೊಂದಿಗೆ ಪ್ರಧಾನಿ ಮೋದಿ
ಬೇಲೂರು ಮಠದಲ್ಲಿ ಸ್ವಾಮಿಗಳೊಂದಿಗೆ ಪ್ರಧಾನಿ ಮೋದಿ

ಹೌರಾ: ತಮ್ಮ ಎರಡನೇ ದಿನದ ಕೋಲ್ಕತ್ತಾ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಬೇಲೂರು ಮಠಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದರು.


ಸ್ವಾಮಿ ರಾಮಕೃಷ್ಣ ಪರಮಹಂಸ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಅಲ್ಲಿ ಸಾಧು ಸಂತರನ್ನು ಭೇಟಿಯಾಗಿ ಪ್ರಾರ್ಥನೆಯಲ್ಲಿ ಭಾಗಿಯಾದರು. ಕಳೆದ ರಾತ್ರಿ ಪ್ರಧಾನಿಗಳು ಇದೇ ಮಠದಲ್ಲಿ ತಂಗಿದ್ದರು.


ಬೇಲೂರು ಮಠ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗೆ ಕೇಂದ್ರ ಸ್ಥಳವಾಗಿದೆ.ಪ್ರಧಾನಿಯಾದ ನಂತರ ಮೋದಿಯವರು ಬೇಲೂರು ಮಠಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. 2015ರ ಮೇ 10ರಂದು ಬೆಳಗ್ಗೆ ಈ ಮಠಕ್ಕೆ ಬಂದು ಪ್ರಾರ್ಥನೆ, ಧ್ಯಾನದಲ್ಲಿ ಕಳೆದಿದ್ದರು. 


ಯುವಕರಾಗಿದ್ದಾಗ ರಾಮಕೃಷ್ಣ ಮಠದ ಶಿಷ್ಯನಾಗಬೇಕೆಂದು ಬಯಸಿದ್ದ ಮೋದಿಯವರು ಮಠದ ಮಾಜಿ ಅಧ್ಯಕ್ಷ ಸ್ವಾಮಿ ಅತ್ವಸ್ತಾನಂದ ಅವರ ಆಣತಿಯಂತೆ ಜನಸೇವೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ರಾಜಕೀಯಕ್ಕೆ ಜೀವನಕ್ಕೆ ಬಂದು ಪ್ರಧಾನಿಯಾದರು.


ಕಳೆದ ರಾತ್ರಿ ಬೇಲೂರು ಮಠದ ಅಂತಾರಾಷ್ಟ್ರೀಯ ಗೆಸ್ಟ್ ಹೌಸ್ ನಲ್ಲಿ ಕಳೆದರು. ಹೊರಗೆ ವಿಶೇಷ ಪೊಲೀಸ್ ಭದ್ರತೆ ಸೇರಿದಂತೆ ತೀವ್ರ ಭದ್ರತೆ ಕಲ್ಪಿಸಲಾಗಿತ್ತು. ಪ್ರಧಾನಿಯವರಿಗೆ ದೇವರಿಗೆ ಸಲ್ಲಿಸಿದ ಪ್ರಸಾದವನ್ನು ಆಹಾರವಾಗಿ ನೀಡಲಾಯಿತು. ಅದರಲ್ಲಿ 5 ಹುರಿದ ಪದಾರ್ಥಗಳು, ಲುಚಿ, ಅಕ್ಕಿ ಕಡುಬು, ಸಿಹಿ ತಿನಿಸು ಮತ್ತು ಹಣ್ಣುಗಳು ಇದ್ದವು. 


ಕಳೆದ ಬಾರಿ ಬಂದಿದ್ದಾಗ ಮೋದಿಯವರು ತಪಸ್ವಿ ಸ್ವಾಮಿ ವಿವೇಕಾನಂದರು ಬಳಸುತ್ತಿದ್ದ ಬೆಡ್ ರೂಂನ್ನು ತೆರೆಯಲು ಹೇಳಿದ್ದರು. ಅಲ್ಲಿ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com