ಎನ್'ಪಿಆರ್'ಗೆ ದಾಖಲೆ, ಬಯೋಮೆಟ್ರಿಕ್ ಕೇಳಲ್ಲ: ಕೇಂದ್ರ ಸರ್ಕಾರ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್'ಪಿಆರ್) ಬಗ್ಗೆ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿದ ಮಧ್ಯೆಯೇ, ನೋಂದಣಿ ಪರಿಷ್ಕರಣೆ ವೇಳೆ ಯಾವುದೇ ದಾಖಲೆಗಳನ್ನಾಗಲಿ ಅಥವಾ ಬಯೋಮೆಟ್ರಿಕ್ ಮಾಹಿತಿಗಳನ್ನು ಪಡೆಯಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್'ಪಿಆರ್) ಬಗ್ಗೆ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿದ ಮಧ್ಯೆಯೇ, ನೋಂದಣಿ ಪರಿಷ್ಕರಣೆ ವೇಳೆ ಯಾವುದೇ ದಾಖಲೆಗಳನ್ನಾಗಲಿ ಅಥವಾ ಬಯೋಮೆಟ್ರಿಕ್ ಮಾಹಿತಿಗಳನ್ನು ಪಡೆಯಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. 

ಆದರೆ, ರೆಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ವೆಬ್ ಸೈಟ್ ನಲ್ಲಿ ಇರುವ ಮಾಹಿತಿಯ ಪ್ರಕಾರ, ಎನ್'ಪಿಆರ್ ದತ್ತಾಂಶಕ್ಕೆ ಬಯೋಮೆಟ್ರಿಕ್ ಮಾಹಿತಿ ಅಗತ್ಯವಿದೆ ಎಂದು ತಿಳಿಸಲಾಗಿದೆ. ಇದೇ ವೇಳೆ ಎನ್'ಪಿಆರ್'ಗೆ ವಿರೋಧ ವ್ಯಕ್ತಪಡಿಸಿರುವ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಎನ್'ಪಿಆರ್ ಪ್ರಕ್ರಿಯೆಗೆ ತಡೆ ನೀಡಿದೆ,

ಏನಿದು ಏನ್'ಪಿಆರ್? 
ದೇಶದ ಜನಗಣತಿಗೆ ಪೂರಕವಾದ ಪ್ರಕ್ರಿಯೆಯೇ ಎನ್'ಪಿಆರ್. ಎನ್'ಪಿಆರ್ ಮೂಲಕ ದೇಸದಲ್ಲಿರುವ ಜನರ ಸಮಗ್ರ ಗುರುತಿನ ತ್ತಾಂಶ ಸಂಗ್ರಹಿಸಲಾಗುತ್ತದೆ. ಬಯೋಮೆಟ್ರಿಕ್ ಯಂತ್ರ ಬಳಸಿ ಜನರ ಗುರುತು ಪಡೆಯಲಾಗುತ್ತದೆ. ದೇಶದ ಯಾವುದೇ ಪ್ರದೇಶದಲ್ಲಿ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸವಾಗಿರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com