ಆರೋಪಿಗಳಿಗೆ ಜಾಮೀನು: ಮಗಳ ಮೇಲೆ ದೌರ್ಜನ್ಯ ನಡೆಸಿದ್ದವರು ತಾಯಿಯನ್ನೂ ಕೊಂದರು! 

2018 ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ನೀಡಿದ್ದ 40 ವರ್ಷದ ಮಹಿಳೆಯನ್ನು ಆರೋಪಿಗಳು ಹೊಡೆದು ಸಾಯಿಸಿದ್ದಾರೆ. 

Published: 18th January 2020 12:38 PM  |   Last Updated: 18th January 2020 12:38 PM   |  A+A-


out on bail, men accused of molesting teen trash her mother to death

ಆರೋಪಿಗಳಿಗೆ ಜಾಮೀನು: ಮಗಳ ಮೇಲೆ ದೌರ್ಜನ್ಯ ನಡೆಸಿದ್ದವರು ತಾಯಿಯನ್ನೂ ಕೊಂದರು!

Posted By : Srinivas Rao BV
Source : Online Desk

ಕಾನ್ಪುರ: 2018 ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ನೀಡಿದ್ದ 40 ವರ್ಷದ ಮಹಿಳೆಯನ್ನು ಆರೋಪಿ ಹೊಡೆದು ಸಾಯಿಸಿದ್ದಾನೆ. 

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. 2018 ರಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮೆಹ್ಫೂಜ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದರು.  ಚಕೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್  ಕೂಡಾ ದಾಖಲಾಗಿತ್ತು. 

ಈ ಆರೋಪಿಗೆ 15 ದಿನಗಳ ಮುನ್ನ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಯಾಗಿದ್ದ.  ಬಿಡುಗಡೆಯಾಗುತ್ತಿದ್ದಂತೆಯೇ ಜ.09 ರಂದು ಈ ಆರೋಪಿ ದೂರು ನೀಡಿದ್ದ ಮಹಿಳೆ ಹಾಗೂ ಸಂತ್ರಸ್ತ ಯುವತಿಯ ಸಹೋದರಿ ಮೇಲೆ ತನ್ನ ಸಹಚರರಾದ ಬಾಬು ಭಾಯ್, ಜಮೀಲ್, ಫಿರೋಜ್, ಪಿಂಟು, ವಾಕೀಲ್ ಸಹಾಯದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 

ಪ್ರಾಥಮಿಕ ವರದಿಗಳ ಪ್ರಕಾರ ಈಗ ಹತ್ಯೆಗೀಡಾಗಿರುವ ಮಹಿಳೆ, ತನ್ನ ಸಹೋದರನನ್ನು ಮದ್ಯ ವ್ಯಸನಕ್ಕೆ ಸಿಲುಕುವಂತೆ ಮಾಡಿದ್ದಕ್ಕೆ ಮೆಹ್ಫೂಜ್ ನನ್ನು ವಿರೋಧಿಸಿದ್ದಳು ಈ ಘಟನೆಯ ನಂತರ ಮಾರಣಾಂತಿಕ ಹಲ್ಲೆ ನಡೆದಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರ ಪ್ರಕಾರ ತನ್ನ ವಿರುದ್ಧ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿ ಒತ್ತಡ ಹೇರುತ್ತಿದ್ದ ಎಂಬ ಅಂಶವೂ ಬಹಿರಂಗವಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp