ಹಾರ್ದಿಕ್ ಪಟೇಲ್ ಗೆ ಪದೇ ಪದೇ ಕಿರುಕುಳ ನೀಡುತ್ತಿರುವ ಬಿಜೆಪಿ- ಪ್ರಿಯಾಂಕಾ ಗಾಂಧಿ

ರೈತರು ಹಾಗೂ ಯುವ ಜನಾಂಗದ ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಗೆ ಬಿಜೆಪಿ ಪದೇ ಪದೇ ಕಿರುಕುಳ ನೀಡುತ್ತಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

Published: 19th January 2020 02:01 PM  |   Last Updated: 19th January 2020 02:07 PM   |  A+A-


Priyanaka_Hardik1

ಪ್ರಿಯಾಂಕಾ ಗಾಂಧಿ, ಹಾರ್ದಿಕ್ ಪಟೇಲ್

Posted By : Nagaraja AB
Source : ANI

ನವದೆಹಲಿ: ರೈತರು ಹಾಗೂ ಯುವ ಜನಾಂಗದ ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಗೆ ಬಿಜೆಪಿ ಪದೇ ಪದೇ ಕಿರುಕುಳ ನೀಡುತ್ತಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಜನರ ಬಗ್ಗೆ ಧ್ವನಿ ಎತ್ತುವ, ಯುವ ಜನಾಂಗಕ್ಕೆ ಉದ್ಯೋಗಕ್ಕಾಗಿ ಕೇಳುವ, ರೈತರಿಗಾಗಿ ಆಂದೋಲನ ಆಯೋಜಿಸುವ ಹಾರ್ದಿಕ್ ಪಟೇಲ್  ಬಿಜೆಪಿಗೆ ಯಾವಾಗಲೂ ದೇಶದ್ರೋಹಿ ರೀತಿಯಾಗಿ ಕಾಣುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

 

ದೇಶದ್ರೋಹ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದಿನ ಕೋರ್ಟ್ ವೊಂದರಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಅವರನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಪೊಲೀಸರನ್ನು ಹತ್ಯೆ ಮಾಡಿ ಇಲ್ಲವೇ ಮೀಸಲಾತಿ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಿ ಎಂಬಂತಹ ಪ್ರಚೋದನಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ 2015ರಲ್ಲಿ ಪಟೇಲ್ ವಿರುದ್ಧ ಅಪರಾಧ ವಿಭಾಗದ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ಆದಾಗ್ಯೂ,ಪೊಲೀಸರು ದಾಖಲಿಸಿರುವ ಜಾರ್ಜ್ ಶೀಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದು ಪಟೇಲ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp