ಅದ್ನಾನ್ ಸಮಿಗೆ ಪೌರತ್ವ ನೀಡುವುದಾದರೆ, ಸಿಎಎ ಏಕೆ ಜಾರಿಗೆ ತಂದಿರಿ: ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ

ಪಾಕಿಸ್ತಾನದ ಮುಸ್ಲಿಮರಿಗೆ ಪೌರತ್ವ ನೀಡುವುದಾದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೇಕೆ ಜಾರಿಗೆ ತಂದಿರಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ಭೋಪಾಲ್: ಪಾಕಿಸ್ತಾನದ ಮುಸ್ಲಿಮರಿಗೆ ಪೌರತ್ವ ನೀಡುವುದಾದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೇಕೆ ಜಾರಿಗೆ ತಂದಿರಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಪಾಕಿಸ್ತಾನ ಮೂಲಕ ಗಾಯಕ ಅದ್ನಾನ್ ಸಮಿಗೆ ಪೌರತ್ವ ನೀಡುವ ಶಿಫಾರಸು ಕುರಿತಂತೆ ತಮ್ಮ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಅದ್ನಾನ್ ಸಮಿಗೆ ಪೌರತ್ವ ನೀಡುವಂತೆ ಶಿಫಾರಸು ಮಾಡಿದ್ದಕ್ಕೆ ನನ್ನ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಅದ್ನಾನ್ ಸಮಿಗೆ ಪೌರತ್ವ ಹಾಗೂ ಪದ್ಮ ಶ್ರೀ ದೊರಕಿರುವುದಕ್ಕೆ ನನಗೆ ಸಂತೋಷವಿದೆ. ಪಾಕಿಸ್ತಾನದ ಮುಸ್ಲಿಮರಿಗೆ ಸರ್ಕಾರ ಪೌರತ್ವ ನೀಡುವುದೇ ಆದರೆ, ಸಿಎಎ ಜಾರಿಗೆ ತರುವ ಅಗತ್ಯವಾದರೂ ಏನಿದೆ? ಹಿಂದೂ ಹಾಗೂ ಮುಸ್ಲಿಮರ ನಡುವೆ ಘರ್ಷಣೆ ಏರ್ಪಡಿಸುವ ಸಲುವಾಗಿಯ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ. 

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಸನಾ ಉಲ್ಲಾ ಅವರನ್ನು ಅಸ್ಸಾಂನಲ್ಲಿ ಎನ್ಆರ್'ಸಿ ಜಾರಿಯಾದ ಬಳಿಕ ವಿದೇಶಿಗ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಭಾರತದ ಯೋಧರನನ್ನು ಬಲಿ ಪಡೆದುಕೊಂಡಿದ್ದ ಪಾಕಿಸ್ತಾನದ ವಾಯುಪಡೆಯ ಪೈಲಟ್ ವೊಬ್ಬರ ಮಗನಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವಗಳ ಪೈಕಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಇದೀಗ ಹಲವ ಹುಬ್ಬೇರುವಂತೆ ಮಾಡಿದೆ. ಪಾಕಿಸ್ತಾನ ಮೂಲದವರಾದ ಅದ್ನಾನ್ ಸಮಿಗೆ 2016ರಲ್ಲಿ ಭಾರತದ ಪೌರತ್ವ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com