ಲಡಾಖಿಗಳು ಚೀನಾ ಭೂ ಅತಿಕ್ರಮಣ ಮಾಡಿದೆ ಅಂತಿದಾರೆ, ಮೋದಿ ಬೇರೇನೆ ಹೇಳುತ್ತಿದ್ದಾರೆ, ಇವರಲ್ಲಿ ಒಬ್ಬರದ್ದು ಸುಳ್ಳು: ರಾಹುಲ್
ಲಡಾಖ್ ಗಡಿಯಲ್ಲಿ ದೇಶದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ವಾಗ್ದಾಳಿ ನಡೆಸಿದ್ದಾರೆ.
Published: 03rd July 2020 03:45 PM | Last Updated: 03rd July 2020 03:51 PM | A+A A-

ರಾಹುಲ್ ಗಾಂಧಿ, ಪ್ರಧಾನಿ ಮೋದಿ
ನವದೆಹಲಿ: ಲಡಾಖ್ ಗಡಿಯಲ್ಲಿ ದೇಶದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ವಾಗ್ದಾಳಿ ನಡೆಸಿದ್ದಾರೆ.
ಚೀನಾದವರು ನಮ್ಮ ಭೂಮಿ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಅಂತಾ ಲಡಾಖ್ ಜನರು ಹೇಳುತ್ತಿದ್ದರೆ ಪ್ರಧಾನಿ ಮೋದಿ ಇಲ್ಲ ಅನ್ನುತ್ತಿದ್ದಾರೆ. ಇವರಲ್ಲಿ ಯಾರೊ ಒಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಲಡಾಖ್ ನಲ್ಲಿ ಚೀನಾ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಲಡಾಖ್ ಜನರು ಹೇಳುತ್ತಿರುವ ವಿಡಿಯೋವೊಂದನ್ನು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
Ladakhis say:
— Rahul Gandhi (@RahulGandhi) July 3, 2020
China took our land.
PM says:
Nobody took our land.
Obviously, someone is lying. pic.twitter.com/kWNQQhjlY7
ಪ್ರಧಾನಿ ನರೇಂದ್ರಮೋದಿ ಇಂದು ಬೆಳಗ್ಗೆ ಲಡಾಖ್ ಗೆ ಭೇಟಿ ನೀಡಿ ಭೂ. ವಾಯು ಸೇನೆ ಹಾಗೂ ಇಂಡೋ -ಟಿಬೇಟಿಯನ್ ಗಡಿ ಪೊಲೀಸರೊಂದಿಗೆ ಸಂವಾದ ನಡೆಸಿದ ಬೆನ್ನಲ್ಲೇ,ರಾಹುಲ್ ಗಾಂಧಿ ಈ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಗಡಿ ವಿವಾದ ವಿಚಾರದಲ್ಲಿ ದೇಶದ ಭೂ ಪ್ರದೇಶವನ್ನು ಚೀನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಟ್ಟುಕೊಟ್ಟಿದ್ದು, ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.