ಸಮಾಜ, ರಾಷ್ಟ್ರದಲ್ಲಿ ಎದುರಾಗುವ ಎಲ್ಲಾ ಸವಾಲುಗಳಿಗೆ ಬುದ್ಧನ 8 ತತ್ತ್ವಾದರ್ಶಗಳಿಂದ ಪರಿಹಾರ ಸಿಗಲಿದೆ: ಪ್ರಧಾನಿ ಮೋದಿ

ಸಮಾಜ ರಾಷ್ಟ್ರದಲ್ಲಿ ಎದುರಾಗುವ ಎಲ್ಲಾ ಸವಾಲುಗಳಿಗೆ ಬುದ್ಧನ 8 ತತ್ತ್ವಾದರ್ಶಗಳಿಂದ ಪರಿಹಾರ ಸಿಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಸಮಾಜ ರಾಷ್ಟ್ರದಲ್ಲಿ ಎದುರಾಗುವ ಎಲ್ಲಾ ಸವಾಲುಗಳಿಗೆ ಬುದ್ಧನ 8 ತತ್ತ್ವಾದರ್ಶಗಳಿಂದ ಪರಿಹಾರ ಸಿಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

ಇಂಟರ್ ನ್ಯಾಷನಲ್ ಬುದ್ದಿಸ್ಟ್ ಕಾನ್ಫರೆನ್ಸ್ ಆಯೋಜಿಸಿರುವ ಧರ್ಮಚಕ್ರ ದಿವಸ್ ಕಾರ್ಯಕ್ರಮದಲ್ಲಿ ಭಾಗವಿಸಿದ ಅವರು, ಆಷಾಢ ಪೂರ್ಣಿಮೆಯ ದಿನ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

 ಈ ವೇಳೆ ಮಾತನಾಡಿದ ಅವರು. ಬುದ್ಧನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ದಿನವನ್ನು ಗುರು ಪೂರ್ಣಿಮೆ ಎಂದು ಹೇಳುತ್ತಾರೆ. ಈ ದಿನ ನಮಗೆ ತಿಳುವಳಿಕೆಯನ್ನು ನೀಡುವ ಗುರುಗಳನ್ನು ಸ್ಮರಿಸುವ ದಿನ. ಈ ದೃಷ್ಟಿಯಿಂದಲೇ ನಾವು ಇಂದು ಭಗವಾನ್ ಬುದ್ಧನಿಗೂ ಗೌರವ ನಮನ ಸಲ್ಲಿಸುತ್ತಿದ್ದೇವೆ. 

ಭಗವಾನ್ ಬುದ್ಧನ ತತ್ತ್ವಾದರ್ಶಗಳು ಸಮಾಜ ಹಾಗೂ ರಾಷ್ಟ್ರಗಳ ಏಳಿಗೆಗೆ ದಾರಿ ತೋರಿಸಿದೆ. ಕರುಣೆ ಮತ್ತು ಸಹಾನುಭೂತಿಯ ಮಹತ್ವವನ್ನು ಇವುಗಳು ಸಾರುತ್ತವೆ. ಭಗವಾನ್ ಬುದ್ಧನ ಸರಳತೆ ಚಿಂತನೆಯಲ್ಲೂ ಮತ್ತು ಕ್ರಿಯೆಯಲ್ಲೂ ಅನುಷ್ಠಾನಗೊಂಡಿದೆ ಎಂದು ಹೇಳಿದರು. 

ಇಂದು ಇಡೀ ವಿಶ್ವ ಕಂಡು ಕೇಳಿರಿಯದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಪರಿಹಾರವು ಬುದ್ಧನ ತತ್ತ್ವಾದರ್ಶಗಳಿಂದಲೇ ಸಿಗಬಹುದು. ಹಿಂದಿನ ಕಾಲದಲ್ಲಿ ಅವುಗಳು ಸಕಾಲಿಕವಾಗಿದ್ದವು. ಈಗಲು ಸಕಾಲಿಕವೇ ಆಗಿವೆ. ಈ ಚಿಂತನೆಗಲು ಸಕಾಲಿಕವಾಗಿಯೇ ಉಳಿಯಲಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com