ದೆಹಲಿ: 1 ಲಕ್ಷ ಗಡಿಯತ್ತ ಕೊರೋನಾ ಸೋಂಕಿತರ ಸಂಖ್ಯೆ, ಶೇ.70ರಷ್ಟು ಸೋಂಕಿತರು ಗುಣಮುಖ

ಮಾರಕ ಕೊರೋನಾ ವೈರಸ್ ಅಬ್ಬರ ದೆಹಲಿಯಲ್ಲಿ ಮುಂದುವರೆದಿದ್ದು, ದೆಹಲಿಯಲ್ಲಿ ಪ್ರಸ್ತುತ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ದಡಿಯತ್ತ ಸಾಗಿದೆ.
ದೆಹಲಿಯಲ್ಲಿ ಕೋವಿಡ್ 19
ದೆಹಲಿಯಲ್ಲಿ ಕೋವಿಡ್ 19

ನವದೆಹಲಿ: ಮಾರಕ ಕೊರೋನಾ ವೈರಸ್ ಅಬ್ಬರ ದೆಹಲಿಯಲ್ಲಿ ಮುಂದುವರೆದಿದ್ದು, ದೆಹಲಿಯಲ್ಲಿ ಪ್ರಸ್ತುತ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ದಡಿಯತ್ತ ಸಾಗಿದೆ.

ನಿನ್ನೆ ಒಂದೇ ದಿನ ದೆಹಲಿಯಲ್ಲಿ 2,505 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು. ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 97,200 ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಹಲಿಯಲ್ಲಿ ನಿನ್ನೆ ಒಂದೇ ದಿನ  55 ಹೊಸ ಕೊವಿಡ್-19 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೆಹಲಿಯಲ್ಲಿ ಕೊರೋನಾ  ಸಾವಿನ ಸಂಖ್ಯೆ 3,004 ಕ್ಕೆ ತಲುಪಿದೆ.

ಶೇ.70ರಷ್ಟು ಸೋಂಕಿತರು ಗುಣಮುಖ
ಕೋವಿಡ್ ಪರೀಕ್ಷೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ದೆಹಲಿಯ ದೈನಂದಿನ ಕೋವಿಡ್ ಪ್ರಕರಣಗಳಲ್ಲಿನ ಇತ್ತೀಚಿನ ದಿನಗಳಲ್ಲಿ ಕುಸಿತ ಕಂಡಿದೆ. ದೆಹಲಿಯಲ್ಲಿ ಒಟ್ಟಾರೆ 97,200 ಪ್ರಕರಣಗಳ ಪೈಕಿ ಈ ವರೆಗೂ 68,256 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ 25,940 ಸೋಂಕಿತರು ಮಾತ್ರ  ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ದೆಹಲಿಯಲ್ಲಿ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ 448ರಷ್ಟಿದೆ.

ಮತ್ತೊಂದು ಸಕಾರಾತ್ಮಕ ಸಂಗತಿ ಎಂದರೆ, ದೆಹಲಿಯ ಪ್ರಸ್ತುತ ಸೋಂಕು ಪಾಸಿಟಿವ್ ದರ 15.9% ಆಗಿದೆ, ಜೂನ್ 13 ರಂದು ಇದರ ಪ್ರಮಾಣ ಶೇ.37 ರಷ್ಟಿತ್ತು. ಇದು ಕೋವಿಡ್-19 ಗಾಗಿ ಪರೀಕ್ಷಿಸಲ್ಪಟ್ಟ ಮೂರು ಜನರಲ್ಲಿ ಒಬ್ಬರು ಸೋಂಕಿಗೆ ಒಳಗಾದ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com