ಗಲ್ವಾನ್ ಸಂಘರ್ಷ: ಕೊನೆಗೂ ವಿವಾದಿತ ಪ್ರದೇಶದಿಂದ 1-2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ!

ಭಾರತ ಮತ್ತು ಚೀನಾದ 20ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ.

Published: 06th July 2020 12:36 PM  |   Last Updated: 06th July 2020 12:47 PM   |  A+A-


Galwan valley

ಗಲ್ವಾನ್ ಕಣಿವೆ

Posted By : Srinivasamurthy VN
Source : ANI

ನವದೆಹಲಿ: ಭಾರತ ಮತ್ತು ಚೀನಾದ 20ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ.

ಹೌದು.. ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು 1 ರಿಂದ 2 ಕಿ.ಮೀ ನಷ್ಚು ಹಿಂದಕ್ಕೆ ಹೋಗಿದೆ. ಅಲ್ಲದೆ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತನ್ನ ಸೇನೇ ಟೆಂಟ್ ಗಳನ್ನೂ ಕೂಡ ಸ್ಥಳಾಂತರ ಮಾಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಗಲ್ವಾನ್ ಸಂಘರ್ಷದ ಬಳಿಕ ಉಭಯ ದೇಶಗಳ ಸೇನಾಧಿಕಾರಿಗಳ ನಡುವಿನ ಮಾತುಕತೆ ಫಲಪ್ರದವಾಗಿದ್ದು, ಚೀನಾ ಸೇನೆ ಮಾತ್ರವಲ್ಲದೇ ಭಾರತೀಯ ಸೇನೆ ಕೂಡ ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ನೀಡಿತ್ತು. ಇದರ ಮೊದಲ ಹಂತವಾಗಿ ಚೀನಾ ಸೇನೆ 2 ಕಿ.ಮೀ ಹಿಂದಕ್ಕೆ ಸರಿದಿದ್ದು, ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿದ್ದ ತನ್ನ ಟೆಂಟ್ ಗಳನ್ನು ಸ್ಥಳಾಂತರ ಮಾಡಿದೆ.

ಜೂನ್ ತಿಂಗಳಲ್ಲಿ ನಡೆದಿದ್ದ ಉಭಯ ದೇಶಗಳ ನಡುವಿನ ಸೇನಾ ಸಂಘರ್ಷ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿತ್ತು. ಅಲ್ಲದೆ ಭಾರತ ಸರ್ಕಾರ ಚೀನಾದ ಆ್ಯಪ್ ಗಳನ್ನು ನಿಷೇಧ ಮಾಡಿತ್ತು. ಅಲ್ಲದೆ ಸರ್ಕಾರಿ ಕಾಮಕಾರಿಗಳಲ್ಲಿ ಚೀನಾ ಸಹಭಾಗಿತ್ವವನ್ನು ರದ್ದು ಮಾಡಿದ್ದಲ್ಲದೇ, ಚೀನಾ ಮೂಲದ ಸಂಸ್ಥೆಗಳಿಂದ ಪಡೆಯುತ್ತಿದ್ದ ಬಿಡಿಭಾಗಗಳನ್ನೂ ಮತ್ತು ಇತರೆ ವಸ್ತುಗಳ ಆಮದಿನ ಮೇಲೂ ನಿಷೇಧ ಹೇರಿತ್ತು.

Stay up to date on all the latest ರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp