ಮಹಾರಾಷ್ಟ್ರ: ಸಂಸ್ಥೆಯ ಅಧಿಕಾರಿಗಳಿಂದ ಉದ್ಯೋಗಿಗೆ ಕಿರುಕುಳ, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ!

ಹಣಕಾಸು ವಿಚಾರದಲ್ಲಿ ವಿವಾದ ಉಂಟಾಗಿ ಕಂಪನಿಯೊಂದರ ಹಿರಿಯ ಅಧಿಕಾರಿಗಳು ಉದ್ಯೋಗಿಗೆ ಕಿರುಕುಳ ನೀಡಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಥ್ರುಡ್ ನಲ್ಲಿ ನಡೆದಿದೆ.
ಮಹಾರಾಷ್ಟ್ರ: ಹಣಕಾಸು ವಿಚಾರದಲ್ಲಿ ವಿವಾದ, ಉದ್ಯೋಗಿಗೆ ಕಿರುಕುಳ, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ!
ಮಹಾರಾಷ್ಟ್ರ: ಹಣಕಾಸು ವಿಚಾರದಲ್ಲಿ ವಿವಾದ, ಉದ್ಯೋಗಿಗೆ ಕಿರುಕುಳ, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ!

ಮುಂಬೈ: ಹಣಕಾಸು ವಿಚಾರದಲ್ಲಿ ವಿವಾದ ಉಂಟಾಗಿ ಕಂಪನಿಯೊಂದರ ಹಿರಿಯ ಅಧಿಕಾರಿಗಳು ಉದ್ಯೋಗಿಗೆ ಕಿರುಕುಳ ನೀಡಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಥ್ರುಡ್ ನಲ್ಲಿ ನಡೆದಿದೆ.

ಕಲಾವಿದರ ಚಿತ್ರಕಲೆಗಳ ಪ್ರದರ್ಶನ ಆಯೋಜಿಸುತ್ತಿದ್ದ ಸಂಸ್ಥೆಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದರು. ಆದರೆ ಕೋವಿಡ್-19 ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಉಂಟಾಯಿತು, ಇದಕ್ಕಾಗಿ ಕಂಪನಿಯ ನಗದಿನಲ್ಲಿ ಉದ್ಯೋಗಿ ದೆಹಲಿಯಲ್ಲೇ ಉಳಿದಿದ್ದಾರೆ. ಈ ಸಂಬಂಧ ಉದ್ಯೋಗಿ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವೆ ವಿವಾದ ಉಂಟಾಗಿದ್ದು, ಉದ್ಯೋಗಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಘಟನೆ ಜೂ.13 ರಂದೇ ನಡೆದಿದ್ದರು, ಜುಲೈ.2 ರಂದು ಪ್ರಕರಣದ ಸಂಬಂಧ ಪೌಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

 "ದೆಹಲಿಯಿಂದ ವಾಪಸ್ಸಾದ ಬಳಿಕ ಸಂಸ್ಥೆಯ ಉದ್ಯೋಗಿ ಮೇ.07 ರಂದು ಪುಣೆಗೆ ವಾಪಸ್ಸಾಗಿದ್ದಾರೆ. ಆದರೆ 17 ದಿನಗಳ ಕಾಲ ಹೊಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿರುವಂತೆ ಉದ್ಯೋಗಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಉದ್ಯೋಗಿಯ ಬಳಿ ಹಣವಿಲ್ಲದ ಕಾರಣ ತನ್ನ ಫೋನ್ ಹಾಗೂ ಡೆಬಿಟ್ ಕಾರ್ಡ್ ನ್ನು ಅಡವಿಟ್ಟಿದ್ದಾರೆ" ಎಂಬುದಾಗಿ ಘಟನೆ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಜೂ.13 ರಂದು ಉದ್ಯೋಗಿಯ ಬಳಿ ಆತ ಖರ್ಚು ಮಾಡಿದ್ದ ಕಂಪನಿಯ ಹಣವನ್ನು ವಾಪಸ್ ನೀಡುವಂತೆ ಮಾಲಿಕ ಆಗ್ರಹಿಸಿದ್ದಾನೆ, ಅಷ್ಟೇ ಅಲ್ಲದೇ ಸಂಸ್ಥೆಯ ಕಚೇರಿಗೆ ಕರೆದೊಯ್ದು ಮಾಲಿಕ ಹಾಗೂ ಇನ್ನಿತರರು ಕಿರುಕುಳ ನೀಡಿದ್ದು, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ, ನಂತರ ಆತನನ್ನು ಕಳಿಸಿದ್ದಾರೆ. ಘಟನೆಯ ಬಳಿಕ ಸಂತ್ರಸ್ತ ತಾನೇ ಸ್ವತಃ ಆಸ್ಪತ್ರೆಗೆ ದಾಖಲಾಗಿ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಈ ವರೆಗೂ ಯಾರನ್ನೂ ಬಂಧಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com