ಚೀನಾವನ್ನು ಟಾರ್ಗೆಟ್ ಮಾಡಿ, ರಾಹುಲ್ ಗಾಂಧಿಯನ್ನಲ್ಲ: ಸರ್ಕಾರಕ್ಕೆ ಕಾಂಗ್ರೆಸ್ 

ಭಾರತ-ಚೀನಾ ಗಡಿ ವಿವಾದಗಳ ಹೆಡ್ ಲೈನ್ ನ್ನು  ನಿರ್ವಹಿಸುವುದಕ್ಕಾಗಿ ಬಿಜೆಪಿ ಗಮನ ಬೇರೆಡೆಗೆ ಸೆಳೆಯುವ ಅಗ್ಗದ ಸಾಹಸದ ಮೊರೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಭಾರತ-ಚೀನಾ ಗಡಿ ವಿವಾದಗಳ ಹೆಡ್ ಲೈನ್ ನ್ನು  ನಿರ್ವಹಿಸುವುದಕ್ಕಾಗಿ ಬಿಜೆಪಿ ಗಮನ ಬೇರೆಡೆಗೆ ಸೆಳೆಯುವ ಅಗ್ಗದ ಸಾಹಸದ ಮೊರೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಂಸತ್ ನ ರಕ್ಷಣಾ ಸ್ಥಾಯಿ ಸಮಿತಿ ಸಭೆಗೆ ಗೈರಾಗುತ್ತಿರುವುದರ ಬಗ್ಗೆ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದ್ದರ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಬಿಜೆಪಿ ಸರ್ಕಾರ ತನ್ನ ಶಕ್ತಿಯನ್ನು ಚೀನಾ ವಿರುದ್ಧ ಹೋರಾಡಲು ಬಳಸಿ, ಸೇನೆಗೆ ಬೆಂಬಲ ನೀಡಿದ್ದರೆ ಚೀನಾದ ಅತಿಕ್ರಮಣದ ವಿಷಯದಲ್ಲಿ ದೇಶದ ಜನತೆಗೆ ಸುಳ್ಳು ಹೇಳಿ ದಾರಿತಪ್ಪಿಸುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಪಕ್ಷದ ವಕ್ತಾರ ರಣ್ದೀಪ್ ಸುರ್ಜೆವಾಲ ಹೇಳಿದ್ದಾರೆ.

ರಾಹುಲ್ ಗಾಂಧಿ ಚೀನಾ ವಿಷಯದಲ್ಲಿ ಪ್ರತಿದಿನ ಪ್ರಧಾನಿಯನ್ನು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ರಾಹುಲ್ ಗಾಂಧಿ ಸಂಸತ್ ನ ರಕ್ಷಣಾ ಸ್ಥಾಯಿ ಸಮಿತಿಗಳ ಒಂದೇ ಒಂದು ಸಭೆಯಗೂ ಹಾಜರಾಗುವುದಿಲ್ಲ. ಆದರೆ ದೇಶದ ಸ್ಥೈರ್ಯ ಕುಗ್ಗಿಸುವ, ಸೇನೆಯ ಶೌರ್ಯವನ್ನು ಪ್ರಶ್ನಿಸುವ ಮಾತುಗಳನ್ನಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದ್ದರು.

ನಡ್ಡಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಣ್ದೀಪ್ ಸುರ್ಜೆವಾಲ, ಬಿಜೆಪಿ ಸರ್ಕಾರ ತನ್ನ ಶಕ್ತಿಯನ್ನು ಚೀನಾ ವಿರುದ್ಧ ಹೋರಾಡಲು ಬಳಸಿ, ಸೇನೆಗೆ ಬೆಂಬಲ ನೀಡಿದ್ದರೆ ಚೀನಾದ ಅತಿಕ್ರಮಣದ ವಿಷಯದಲ್ಲಿ ದೇಶದ ಜನತೆಗೆ ಸುಳ್ಳು ಹೇಳಿ ದಾರಿತಪ್ಪಿಸುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಕಳೆದ 3 ತಿಂಗಳಲ್ಲಿ ಸರ್ಕಾರ ರಕ್ಷಣಾ ಸ್ಥಾಯಿಸಮಿತಿಯ ಸಭೆಗಳನ್ನೇ ಕರೆದಿಲ್ಲ ಲಡಾಖ್ ನಲ್ಲಿ ಗಡಿ ಸಮಸ್ಯೆ ಇದ್ದಾಗಲೂ ಸಭೆ ನಡೆಸಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಬಿಜೆಪಿಯ ಅಗ್ಗದ, ವ್ಯಕ್ತಿಕೇಂದ್ರಿತ ವಿದೇಶಾಂಗ ನೀತಿಗಳು ವಿಫಲವಾಗಿರುವುದರಿಂದ ಬಿಜೆಪಿ ಗದ್ದಲವೆಬ್ಬಿಸುತ್ತಿದೆ ಎಂದು ಪವನ್ ಖೇರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com