ಕಾನ್ಪುರ ಎನ್ ಕೌಂಟರ್: ದಾಳಿ ಬಗ್ಗೆ ವಿಕಾಸ್ ದುಬೆಗೆ ಮೊದಲೇ ಮಾಹಿತಿ ನೀಡಿದ ಇಬ್ಬರು ಪೊಲೀಸರ ಬಂಧನ

ಕಳೆದ ವಾರ ನಡೆದಿದ್ದ ಕಾನ್ಪುರ ಎನ್ ಕೌಂಟರ್ ನಲ್ಲಿ 8 ಪೊಲೀಸರ ಹತ್ಯೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಚೌಬೆಪುರ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮತ್ತು ಸಬ್ ಇನ್ಸ್ ಪೆಕ್ಟರ್ ಕೆ ಕೆ ಶರ್ಮಾ ಅವರನ್ನು ಉತ್ತರ ಪ್ರದೇಶದ ಎಸ್ ಟಿಎಫ್ ಬುಧವಾರ ಬಂಧಿಸಿದೆ.
ವಿಕಾಸ್ ದುಬೆ ಮನೆ ಮುಂಭಾಗದಲ್ಲಿರುವ ಪೊಲೀಸರು
ವಿಕಾಸ್ ದುಬೆ ಮನೆ ಮುಂಭಾಗದಲ್ಲಿರುವ ಪೊಲೀಸರು

ಲಖೌನೌ: ಕಳೆದ ವಾರ ನಡೆದಿದ್ದ ಕಾನ್ಪುರ ಎನ್ ಕೌಂಟರ್ ನಲ್ಲಿ 8 ಪೊಲೀಸರ ಹತ್ಯೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಚೌಬೆಪುರ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮತ್ತು ಸಬ್ ಇನ್ಸ್ ಪೆಕ್ಟರ್ ಕೆ ಕೆ ಶರ್ಮಾ ಅವರನ್ನು ಉತ್ತರ ಪ್ರದೇಶದ ಎಸ್ ಟಿಎಫ್ ಬುಧವಾರ ಬಂಧಿಸಿದೆ.

ಚೌಬೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ರೂ ಗ್ರಾಮದ ಬಳಿ ರೌಡಿ ಶೀಟರ್ ವಿಕಾಸ್ ದುಬೆ ವಿರುದ್ಧ ನಡೆದ ಎನ್ ಕೌಂಟರ್ ವೇಳೆಯಲ್ಲಿ ತಿವಾರಿ ಮತ್ತು ಶರ್ಮಾ ಕೂಡಾ ಅಲ್ಲಿದ್ದರು.ಆದರೆ,ದರೋಡೆಕೋರರಿಂದ ಪೊಲೀಸರ ಮೇಲೆ ದಾಳಿ ನಡೆದಿದ್ದಾಗ ಇವರಿಬ್ಬರು ಓಡಿ ಹೋಗಿದ್ದರು ಎಂದು ಕಾನ್ಪುರ ಐಜಿ ಮೋಹಿತ್ ಅಗರ್ ವಾಲ್ ಹೇಳಿದ್ದಾರೆ.

ಕಾನ್ಪುರ ಎನ್ ಕೌಂಟರ್ ಪ್ರಕರಣ ಸಂಬಂಧ ತನಿಖೆ ನಡೆಸಿದ ಉತ್ತರ ಪ್ರದೇಶ ಎಸ್ ಟಿಎಫ್ ,ತಿವಾರಿ ಮತ್ತು ಶರ್ಮಾ ಅವರನ್ನು ಬಂಧಿಸಿದೆ.ವಿಕಾಸ್ ದುಬೆ ವಿರುದ್ಧದ ಪೊಲೀಸ್ ಕಾರ್ಯಾಚರಣೆ ಬಗ್ಗೆ ಮೊದಲೆ ಮಾಹಿತಿ ನೀಡಿರುವ ಬಗ್ಗೆ ಪುರಾವೆಗಳು ದೊರಕಿವೆ.

ಪೊಲೀಸ್ ಕಾರ್ಯಾಚರಣೆಗೂ ಮುಂಚಿತವಾಗಿ ವಿನಯ್ ತಿವಾರಿ ಮತ್ತು ಕೆ ಕೆ ಶರ್ಮಾ ವಿಕಾಸ್ ದುಬೆಗೆ ಮಾಹಿತಿ ನೀಡಿದ್ದರು. ಆದ್ದರಿಂದ ಅವರು ವ್ಯವಸ್ಥಿತವಾಗಿ ದಾಳಿ ನಡೆಸಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದಾರೆ ಎಂದು ಕಾನ್ಪುರ ಎಸ್ ಎಸ್ ಪಿ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.

ಜುಲೈ 2 ರಂದು ಮಧ್ಯರಾತ್ರಿ ದರೋಡೆಕೋರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆಯಲ್ಲಿ ಎನ್ ಕೌಂಟರ್ ಸ್ಥಳದಿಂದ ಓಡಿಹೋಗಿದ್ದ ಹಾಗೂ ದುಬೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ತಿವಾರಿ ಮತ್ತು ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿನೇಶ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com