ಸಣ್ಣ ಉದ್ಯಮಗಳು ನಾಶದ ಹಾದಿಯಲ್ಲಿದೆ, ಆರ್ಥಿಕ ಸುನಾಮಿ ಬಗ್ಗೆ ನಾನೇ ಹೇಳಿದ್ದೆ: ರಾಹುಲ್ ಗಾಂಧಿ

ಸಣ್ಣ ಮತ್ತು ಮಧ್ಯಮ ಉದ್ಯಮಗಳು "ನಾಶದ ಹಾದಿ ಹಿಡಿದಿವೆ", ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿದೆ  ಕೊರೋನಾ ಹಿನ್ನೆಲೆಯಲ್ಲಿ  "ಆರ್ಥಿಕ ಸುನಾಮಿ" ಯ ಬಗ್ಗೆ ಎಚ್ಚರಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳು "ನಾಶದ ಹಾದಿ ಹಿಡಿದಿವೆ", ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿದೆ  ಕೊರೋನಾ ಹಿನ್ನೆಲೆಯಲ್ಲಿ  "ಆರ್ಥಿಕ ಸುನಾಮಿ" ಯ ಬಗ್ಗೆ ಎಚ್ಚರಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಎನ್‌ಪಿಎ ಸಮಸ್ಯೆಯನ್ನು ಎತ್ತಿ ತೋರಿಸಿದ್ದ ಬ್ಯಾಂಕುಗಳು ನನ್ನ ವಿರುದ್ಧ ಹರಿಹಾಯ್ದಿದ್ದವು  ಆದರೆ ಇಂದು ಬಿಜೆಪಿ ಆಡಳಿತದಲ್ಲಿ ಅದೇ ಬ್ಯಾಂಕುಗಳು ಸಂಕಷ್ಟ ಎದುರಿಸುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

"ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶದತ್ತ ಸಾಗಿದೆ. ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿವೆ. ಬ್ಯಾಂಕುಗಳು ಸಂಕಷ್ಟದಲ್ಲಿವೆ" ಎಂದ ರಾಹುಲ್  "ಆರ್ಥಿಕ ಸುನಾಮಿ ಬರುತ್ತಿದೆ ಎಂದು ನಾನು ತಿಂಗಳ ಹಿಂದೆ ಹೇಳಿದ್ದೆ, ಆದರೆ ಈ ಎಚ್ಚರಿಕೆ ನೀಡಿದ್ದಕ್ಕಾಗಿ ಬಿಜೆಪಿ ಮತ್ತು ಮಾಧ್ಯಮಗಳು ಅಪಹಾಸ್ಯ ಮಾಡಿದ್ದವು" ಅವರು ಹೇಳೀದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಟಾಪ್ 500 ಸಂಸ್ಥೆಗಳು 1.67 ಲಕ್ಷ ಕೋಟಿ ರೂ. ಎನ್ ಪಿಎ ಹೊಂದುವ ಸಾಧ್ಯತೆ ಇದೆ ಎಂದು ಸಹ ಅವರು ಉಲ್ಲೇಖಿಸಿದ್ದಾರೆ.

ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಸಹಾಯಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಬಿಜೆಪಿಯ ಆರ್ಥಿಕ ನೀತಿಗಳನ್ನು ಕುರಿತು ಟೀಕಿಸಿದ್ದಾರೆ. ಇದಲ್ಲದೆ  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಅವರು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com