ದೆಹಲಿ: 24 ಗಂಟೆಗಳಲ್ಲಿ 2187 ಹೊಸ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 1,07,051 ಕ್ಕೆ ಏರಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೊರೋನಾ ಆರ್ಭಟಿಸಿದ್ದು, ನಿನ್ನೆ ಒಂದೇ ದಿನ 2187 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. 
ದೆಹಲಿ-ಕೋವಿಡ್ 19
ದೆಹಲಿ-ಕೋವಿಡ್ 19

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೊರೋನಾ ಆರ್ಭಟಿಸಿದ್ದು, ನಿನ್ನೆ ಒಂದೇ ದಿನ 2187 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. 

ಹೌದು.. ಕಳೆದ 24 ಗಂಟೆಗಳಲ್ಲಿ 2187 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,07,051 ಕ್ಕೆ ಏರಿಕೆಯಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಇಲಾಖೆ,  ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 61 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ  2,864ಕ್ಕೆ ಏರಿಕೆಯಾಗಿದೆ. ಈ ನಡುವೆ ನಿನ್ನೆ ಒಂದೇ ದಿನ 4027 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

ಇದರಂತೆ ದೆಹಲಿಯಲ್ಲಿ ನಿನ್ನೆ 47 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ದೆಹಲಿಯಲ್ಲಿ ಒಟ್ಟಾರೆ 3,258 ಸೋಂಕಿತರು ಸಾವನ್ನಪ್ಪಿದ್ದಾರೆ. ನಿನ್ನೆ ಒಟ್ಟಾರೆ 82,226 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿನ್ನೂ 24,825 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.  

ಅಂತೆಯೇ ದೆಹಲಿಯಲ್ಲಿ ನಿನ್ನೆ 9,719 RT-PCR ಟೆಸ್ಟ್ ಮಾಡಲಾಗಿದ್ದು, 12,570 ರ್ಯಾಪಿಡ್ ಆ್ಯಂಟಿ ಜೆನ್ ಟೆಸ್ಟ್ ಮಾಡಲಾಗಿದೆ. ಒಟ್ಟಾರೆ ದೆಹಲಿಯಲ್ಲಿ ಈ ವರೆಗೂ 7,24,148 ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com