ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಭಾರತದ ಯೋಧ ಹುತಾತ್ಮ

ಪಾಕಿಸ್ತಾನ ಸೇನೆ ಇಂದು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೇನೆಯ ಶೆಲ್ಲಿಂಗ್ ನಿಂದಾಗಿ ಇಂಡೋ-ಪಾಕ್ ಗಡಿಯ ನೌಶೇರಾ ಸೆಕ್ಟರ್ ನಲ್ಲಿ ಕರ್ತವ್ಯ ನಿರತರಾಗಿದ್ದ ಭಾರತದ ಸೈನಿಕ ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಹವಾಲ್ದಾರ್ ಸಂಬುರ್ ಗುರುಂಗ್
ಹುತಾತ್ಮ ಯೋಧ ಹವಾಲ್ದಾರ್ ಸಂಬುರ್ ಗುರುಂಗ್

ಶ್ರೀನಗರ: ಪಾಕಿಸ್ತಾನ ಸೇನೆ ಇಂದು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೇನೆಯ ಶೆಲ್ಲಿಂಗ್ ನಿಂದಾಗಿ ಇಂಡೋ-ಪಾಕ್ ಗಡಿಯ ನೌಶೇರಾ ಸೆಕ್ಟರ್ ನಲ್ಲಿ ಕರ್ತವ್ಯ ನಿರತರಾಗಿದ್ದ ಭಾರತದ ಸೈನಿಕ ಹುತಾತ್ಮರಾಗಿದ್ದಾರೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೆಡೆ ಉಗ್ರರ ಉಪಟಳ ಮತ್ತು ಮತ್ತೊಂದೆಡೆ ಪಾಕಿಸ್ತಾನ ಸೈನಿಕರ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮುಂದುವರೆದಿದ್ದು, ಇಂದು ಪಾಕಿಸ್ತಾನ ಸೇನೆ ನಡೆಸಿದ ಶೆಲ್ಲಿಂಗ್ ನಲ್ಲಿ ಭಾರತದ ಓರ್ವ ಯೋಧ ಬಲಿಯಾಗಿದ್ದಾರೆ. ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಎಲ್ ಒಸಿಯ ನೌಶೇರಾ ಸೆಕ್ಟರ್ ನಲ್ಲಿ ನಡೆದ ಮಾರ್ಟರ್ ಶೆಲ್ಲಿಂಗ್ ಮತ್ತು ಸ್ವಯಂಚಾಲಿತ ಶಾಸ್ತ್ರಾಸ್ತ್ರಗಳ  ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದಾರೆ. ಅಲ್ಲದೆ ಓರ್ವ ಸ್ಥಳೀಯ ಮಹಿಳೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹುತಾತ್ಮ ಯೋಧನನ್ನು ಹವಾಲ್ದಾರ್ ಸಂಬುರ್ ಗುರುಂಗ್ ಎಂದು ಗುರುತಿಸಲಾಗಿದೆ. ಅಲ್ಲದೆ ಇದೇ ದಾಳಿಯಲ್ಲಿ ಹಕಮ್ ಬಿ ಮತ್ತು ರೇಷಮ್ ಬಿ ಎಂಬ ಸ್ಥಳೀಯರು ಕೂಡ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತ್ತ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಕೂಡ ಸೂಕ್ತ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದು, ಶೆಲ್ಲಿಂಗ್ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ಪೂಂಚ್  ನ ಸೇನಾ ಉಪಾಯುಕ್ತ ರಾಹುಲ್ ಯಾದವ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com