ಬೋಯಿಂಗ್ ನಿಂದ ಭಾರತೀಯ ವಾಯುಪಡೆಗೆ ಯುದ್ಧ ಹೆಲಿಕಾಪ್ಟರ್ ಪೂರೈಕೆ ಕಾರ್ಯ ಪೂರ್ಣ: ಐಎಎಫ್‌ 

ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಪೂರೈಕೆ ಮಾಡುವ ಕಾರ್ಯ  ಪೂರ್ಣಗೊಳಿಸಿದೆ. 22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಅಂತಿಮ ಐದನ್ನುಹಿಂದಾನ್‌ನ ವಾಯುಪಡೆಯ ನಿಲ್ದಾಣದಲ್ಲಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.
ಬೋಯಿಂಗ್ ಹೆಲಿಕಾಪ್ಟರ್
ಬೋಯಿಂಗ್ ಹೆಲಿಕಾಪ್ಟರ್

ನವದೆಹಲಿ: ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ  ಪೂರೈಕೆ ಮಾಡುವ ಕಾರ್ಯ  ಪೂರ್ಣಗೊಳಿಸಿದೆ. 22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಅಂತಿಮ ಐದನ್ನುಹಿಂದಾನ್‌ನ ವಾಯುಪಡೆಯ ನಿಲ್ದಾಣದಲ್ಲಿ ವಾಯುಸೇನೆಗೆ ಹಸ್ತಾಂತರಿಸಲಾಯಿತು. ಮಾರ್ಚ್ ನಲ್ಲಿ ಬೋಯಿಂಗ್ ಕೊನೆಯ 15 CH-47F(I)  ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್ ಗಳನ್ನು ವಾಯುಸೇನೆಗೆ  ಹಸ್ತಾಂತರಿಸಿತ್ತು ಎಂದು ಐಎಎಫ್‌ ಹೇಳಿಕೆ ವಿವರಿಸಿದೆ.

"ಗ್ರಾಹಕ ಕೇಂದ್ರಿತತೆ, ಭಾರತದ ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಬದ್ಧತೆ ಮತ್ತು ಮಿಷನ್-ಸಿದ್ಧತೆ ಭಾರತದೊಂದಿಗಿನ ನಮ್ಮ ಸಹಭಾಗಿತ್ವದ  ಪ್ರಮುಖ ಮೌಲ್ಯಗಳಾಗಿವೆ" ಎಂದು ಬೋಯಿಂಗ್ ಡಿಫೆನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಅಹುಜಾ ಹೇಳಿದರು.

"ಮಿಲಿಟರಿ ಹೆಲಿಕಾಪ್ಟರ್‌ಗಳ ವಿತರಣೆಯೊಂದಿಗೆ, ನಾವು ಈ ಪಾಲುದಾರಿಕೆಯನ್ನು ಪೋಷಿಸುವುದನ್ನು ಮುಂದುವರಿಸುತ್ತೇವೆ ಮತ್ತು ಅವರ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಸರಿಯಾದ ಮೌಲ್ಯ ಮತ್ತು ಸಾಮರ್ಥ್ಯಗಳನ್ನು ಒಳಗೊಡಂತೆ ಭಾರತದ ರಕ್ಷಣಾ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ" ಎಂದು ಅಹುಜಾ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com