ಜೈಲಲ್ಲಿ ವರವರ ರಾವ್ ಕೊಲಲ್ಲು ಯತ್ನ, ಕೂಡಲೇ ಆಸ್ಪತ್ರೆಗೆ ಸೇರಿಸಬೇಕು-ಬಂಧಿತ ಕ್ರಾಂತಿಕಾರಿ ಕವಿಯ ಸಂಬಂಧಿಕರ ಒತ್ತಾಯ

ಬಂಧಿತ ಕ್ರಾಂತಿಕಾರಿ ಕವಿ ವರವರ ರಾವ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸುತ್ತಿದ್ದು, ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೂಡಲೇ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ, ಉತ್ತಮ ಚಿಕಿತ್ಸೆ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್
ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್

ಹೈದರಾಬಾದ್: ಬಂಧಿತ ಕ್ರಾಂತಿಕಾರಿ ಕವಿ ವರವರ ರಾವ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸುತ್ತಿದ್ದು, ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೂಡಲೇ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ, ಉತ್ತಮ ಚಿಕಿತ್ಸೆ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರವರ ರಾವ್ ಹೆಂಡತಿ ಹೇಮಲತಾ, ಫೋನ್ ನಲ್ಲಿ ಮಾತನಾಡುವಾಗ, ಏಳು ದಶಕಗಳ ಹಿಂದೆ ನಿಧನರಾಗಿರುವ ಪೋಷಕರ ಅಂತ್ಯಕ್ರಿಯೆಯಲ್ಲಿ  ಪಾಲ್ಗೊಂಡಿದ್ದೇಯಾ ಎಂದು ನನ್ನನ್ನು ಕೇಳಿದರು. ಅವರ ಧ್ವನಿ ದುರ್ಬಲವಾಗಿತ್ತು. ಧ್ವನಿ ಮತ್ತು ಮಾತು ಸ್ಪಷ್ಟವಾಗಿರಲಿಲ್ಲ, ತೆಲುಗಿನಿಂದ ಹಿಂದಿಗೆ ಹಠಾತ್ತನೆ ಬದಲಾಯಿಸುತ್ತಿದ್ದರು ಎಂದರು.

ಐದು ದಶಕಗಳಿಂದ ತೆಲುಗಿನಲ್ಲಿ ನಿರರ್ಗಳ, ಸ್ಪಷ್ಟ ಭಾಷಣಕಾರ, ಬರಹಗಾರರಾಗಿ ಹಾಗೂ ನಾಲ್ಕು ದಶಕಗಳ ಕಾಲ ತೆಲುಗು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ವರವರ ರಾವ್ ಅವರು ನಿಖರವಾದ ನೆನಪಿನ ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಆದರೆ, ಈ ಮುಜುಗರ, ಅಸಂಗತತೆ ಮತ್ತು ಜ್ಞಾಪಕ ಶಕ್ತಿ ಹೋಗಿರುವುದು ತಮ್ಮಲ್ಲಿ ವಿಚಿತ್ರ ಮತ್ತು ಭಯಾನಕ ಅನುಭವ ಮೂಡಿಸುತ್ತಿದೆ ಎಂದು
ವರ ವರ ರಾವ್ ಅವರ ಮಗಳು ಪಾವನ ಹೇಳಿದರು.

ನಿನ್ನೆ ದಿನ ಕರೆ ಮಾಡಿದಾಗ ಅವರ ಆರೋಗ್ಯದ ಬಗ್ಗೆ ನೇರವಾದ ಉತ್ತರ ನೀಡಲಿಲ್ಲ. ಅವರಿಗೆ ಮಾತನಾಡಲು ಆಗುತ್ತಿರಲಿಲ್ಲ. ಅವರ ಫೋನ್ ಪಡೆದು ಮಾತನಾಡಿದ ಸಹ ಆರೋಪಿ ವೆರ್ನಾನ್ ಗೊನ್ಸಾಲ್ವ್ಸ್  ವರವರ ರಾವ್ ನಡೆಯಲು ಆಗುತ್ತಿಲ್ಲ, ಶೌಚಾಲಯ, ಹಲ್ಲು ಉಜ್ಜುವುದಕ್ಕೂ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಬಿಡುಗಡೆಯಾದರೆ ತನ್ನನ್ನು ಕರೆದೊಯ್ಯಲು ಕುಟುಂಬಸ್ಥರು ಬರುತ್ತಾರೆ ಎಂದು ಜೈಲಿನ ಗೇಟ್ ಬಳಿ ಕಾಯುತ್ತಿರುತ್ತಾರೆ ಎಂದು ತಿಳಿಸಿದರು ಎಂದು ಪಾವನ ಹೇಳಿದರು.

ಜೈಲು ಆಸ್ಪತ್ರೆಯಿಂದ ವೈದ್ಯಕೀಯ ನೆರವು ನೀಡುತ್ತಿಲ್ಲ, ತಮ್ಮ ತಂದೆಯ ಜೀವ ಹಾಗೂ ಬುದ್ದಿಶಕ್ತಿ ಹಾಳಾಗುವುದನ್ನು ತಡೆಯಲು ಕೂಡಲೇ ಅವರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಾದ ಅಗತ್ಯವಿದೆ ಎಂದು ಪಾವನ ಒತ್ತಾಯಿಸಿದರು.ಅವರನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂಬುದು ತಮ್ಮ ಒಂದೇ ಒಂದು ಬೇಡಿಕೆಯಾಗಿದೆ ಎಂದು ವರವರ ರಾವ್ ಅವರ ಅಳಿಯ ವೇಣುಗೋಪಾಲ್ ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ನಕ್ಸಲ್ ಸಂಚು ಹಾಗೂ ಭೀಮಾ ಕೋರೆಂಗಾವ್ ಹಿಂಸಾಚಾರ ಪ್ರಕರಣದ ನಂಟಿನ ಆರೋಪದೊಂದಿಗೆ 2018ರ ನವೆಂಬರ್ ನಲ್ಲಿ ಬಂಧಿಸಲಾದ ವರವರ ರಾವ್ ಪ್ರಸ್ತುತ ಮುಂಬೈಯ ತಾಲೋಜಾ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com