
ಕೊರೋನಾ ವೈರಸ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಆರ್ಭಟ ಇಂದು ಕೊಂಚ ತಗ್ಗಿದ್ದು, ಇಂದು ಒಂದೇ ದಿನ 1246 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.
ಹೌದು.. ಕಳೆದ 24 ಗಂಟೆಗಳಲ್ಲಿ 1246 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,13,740ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಇಲಾಖೆ, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 40 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 3,258ಕ್ಕೆ ಏರಿಕೆಯಾಗಿದೆ. ಈ ನಡುವೆ ಇಂದು ಒಂದೇ ದಿನ 1344 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟಾರೆ 91312 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,017 ಕ್ಕೆ ಕುಸಿದಿದೆ.
ಅಂತೆಯೇ ದೆಹಲಿಯಲ್ಲಿ ನಿನ್ನೆ 12,171 ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು, 3860 RT-PCR ಟೆಸ್ಟ್ ಮಾಡಲಾಗಿದೆ. 8311 ರ್ಯಾಪಿಡ್ ಆ್ಯಂಟಿ ಜೆನ್ ಟೆಸ್ಟ್ ಮಾಡಲಾಗಿದೆ.
1246 #COVID19 positive cases, 1344 recovered/discharged/migrated and 40 deaths in Delhi today. The total number of positive cases in the national capital rises to 1,13,740 including 91,312 recovered/discharged/migrated and 3,411 deaths: Government of Delhi pic.twitter.com/tagL8ExLE9
— ANI (@ANI) July 13, 2020
12,171 #COVID19 tests conducted in the national capital today - 3860 RTPCR/CBNAAT/True NAAT tests and 8311 Rapid antigen tests: Delhi Government https://t.co/ADygMVo5EO
— ANI (@ANI) July 13, 2020