ಅಸ್ಸಾಂ ರಾಜಭವನದಲ್ಲಿ 70 ಕೋವಿಡ್ -19 ಕೇಸ್ ಗಳು ಪತ್ತೆ

ಅಸ್ಸಾಂ ರಾಜಭವನದಲ್ಲಿ  70 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಕಂಟೈನ್ ಮೆಂಟ್ ವಲಯವೆಂದುಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಗುವಾಹಟಿ: ಅಸ್ಸಾಂ ರಾಜಭವನದಲ್ಲಿ  70 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಕಂಟೈನ್ ಮೆಂಟ್ ವಲಯವೆಂದು
ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

70 ಕೇಸ್ ಗಳ ಪೈಕಿ 27 ಶನಿವಾರ ರಾತ್ರಿ ಪತ್ತೆಯಾಗಿವೆ. ಉಳಿದವು ಜುಲೈ 1ರಿಂದ ಪತ್ತೆಯಾದ ಪಾಸಿಟಿವ್ ಪ್ರಕರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರ್ನರ್ ಕಚೇರಿಯಲ್ಲಿನ ಇಬ್ಬರು ಸಿಬ್ಬಂದಿಗಳಿಗೆ ಪಾಸಿಟಿವ್ ಬಂದ ನಂತರ ಜುಲೈ 4ರಿಂದ ಇಡೀ ರಾಜಭವನ ಆವರಣವನ್ನು ಕಂಟೈನ್ ಮೆಂಟ್ ವಲಯವೆಂದು ಘೋಷಿಸಲಾಗಿದೆ.

ಇಬ್ಬರು ಭದ್ರತಾ ಅಧಿಕಾರಿಗಳಿಗೆ ಸೋಂಕು ತಗುಲಿದ್ದರಿಂದ ರಾಜಭವನದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದ್ದ 176 ಸಿಬ್ಬಂದಿಗಳು ಸೇರಿದಂತೆ  ರಾಜ್ಯಪಾಲ ಜಗದೀಶ್ ಮುಖಿ, ಅವರ ಪತ್ನಿ ಪ್ರೇಮ್ ಮುಖಿ ಹಾಗೂ ಅವರ ಕುಟುಂಬದ ಐವರು ಸದಸ್ಯರನ್ನು ಈ ಹಿಂದೆಯೇ ಕೋವಿಡ್- ಪರೀಕ್ಷೆ ನಡೆಸಲಾಗಿತ್ತು.

ಜುಲೈ 1ರಂದು ನಡೆಸಲಾದ ಪರೀಕ್ಷೆಯಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ, ರಾಜ್ಯಪಾಲರು ಹಾಗೂ ಅವರ ಪತ್ನಿಗೆ ನೆಗೆಟಿವ್  ಕಂಡುಬಂದಿತ್ತು. ನಂತರ ರಾಜ್ಯಪಾಲರ ಆಯುಕ್ತರು ಮತ್ತು ಕಾರ್ಯದರ್ಶಿ ಮೀನಾಕ್ಷಿ ಸುಂದರಂ , ಅವರ ಪತ್ನಿ ಹಾಗೂ ತಾಯಿಗೂ ಸೋಂಕು ದೃಢಪಟ್ಟಿದೆ. ಆಗಿನಿಂದಲೂ  ಇಡೀ ರಾಜಭವನದ ಆವರಣವನ್ನು ಕಂಟೈನ್ ಮೆಂಟ್ ವಲಯವೆಂದು ಜಿಲ್ಲಾಧಿಕಾರಿ ಬಿಸ್ವಾಜಿತ್ ಪೆಗೂ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com