ನಾಪತ್ತೆಯಾಗಿದ್ದ ಯುವಕ ಉಗ್ರ ಸಂಘಟನೆಗೆ ಸೇರ್ಪಡೆ

ಜುಲೈ 20 ರಿಂದ ನಾಪತ್ತೆಯಾಗಿದ್ದ ಹದಿಹರೆಯದ ಯುವಕನೊಬ್ಬ ಜುಲೈ 25 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ. ಆತನ ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆಯಾಗಿರುವ ಕುರಿತು ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜುಲೈ 20 ರಿಂದ ನಾಪತ್ತೆಯಾಗಿದ್ದ ಹದಿಹರೆಯದ ಯುವಕನೊಬ್ಬ ಜುಲೈ 25 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ. ಆತನ ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆಯಾಗಿರುವ ಕುರಿತು ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾನೆ.

ಇತ್ತೀಚೆಗಷ್ಟೆ ದಕ್ಷಿಣ ಕಾಶ್ಮೀರದ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದೆ. 

ಚತ್ರಿಗಮ್ ಶೋಪಿಯಾನ್ ನ ಕಲನ್ ಗ್ರಾಮದ ನಿವಾಸಿ ಮಗ ಬಶೀರ್ ಅಹ್ಮದ್ ಗನಿ ಎಂಬುವರ ಪುತ್ರ 17 ವರ್ಷದ ಆಸಿಫ್ ಅಹ್ಮದ್ ಗನಿ, ಜುಲೈ 20 ರಂದು ಅವರ ಮನೆಯಿಂದ ನಾಪತ್ತೆಯಾಗಿದ್ದರು.

ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರೂ ಕೂಡ ಭಾರಿ ಶೋಧ ಕಾರ್ಯ ನಡೆಸಿದ್ದರು. 

ಎಲ್ಲೇ ಇದ್ದರೂ ವಾಪಸಾಗುವಂತೆ ಕುಟುಂಬ ಸದಸ್ಯರು, ವಿಶೇಷವಾಗಿ ಅವರ ಪೋಷಕರು, ಆಸಿಫ್‌ಗೆ ಪದೇ ಪದೇ ಮನವಿ ಮಾಡಿದರು. ಆದರೆ, ಇಂದು ಎಸಿ ರೈಫಲ್ ಹಿಡಿದಿರುವ ಆಸಿಫ್ ಅವರ ಭಾವಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರು ಜುಲೈ 25 ರಂದು ಅಲ್-ಬದ್ರ್ ಸೇರಿದ್ದಾರೆ ಎಂದು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com