ಪುತ್ರಿಯ ಅನ್‍ಲೈನ್ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ ರೈತ: ಅಧಿಕಾರಿಗಳಿಂದ ಸತ್ಯಾಂಶ ಬಯಲು!

ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳು ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿಮ್ಲಾ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳು ಎನ್ನಲಾಗಿದೆ.

ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಬಾಲಿವುಡ್ ನಟ ಸೋನು ಸೂದ್ ಆದಿಯಾಗಿ ಖ್ಯಾತನಾಮರು ರೈತ ಕುಲದೀಪ್ ಕುಮಾರ್ ಅವರಿಗೆ ನೆರವಿನ ಹಸ್ತ ಚಾಚಿದ್ದರು. ಆದರೆ ರೈತನ ಈ ಸುದ್ದಿ ಸುಳ್ಳು ಎಂಬುದನ್ನು ಸ್ಥಳೀಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಡಿಎನ್ಎ ಪತ್ರಿಕೆ ವರದಿ ಮಾಡಿದ್ದು,  ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತ ಕುಲದೀಪ್ ಕುಮಾರ್ ತಮ್ಮ ಹಸುವನ್ನು 6 ಸಾವಿರ ರೂ.ಗೆ ಮಾರಾಟ ಮಾಡಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ ಎಂದ ಸುದ್ದಿಗಳು ಪ್ರಕಟವಾಗಿತ್ತು. 

ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಂಗ್ರಾ ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ನೈಜ ಚಿತ್ರಣ ಬಯಲಾಗಿದೆ. ರೈತ ಕುಲದೀಪ್ ಕೊಟ್ಟಿಗೆಯಲ್ಲಿ ಜಾಗವಿಲ್ಲದ ಕಾರಣ ತನ್ನ ಹಸುವನ್ನು ಜುಲೈ 10ರಂದು ಪರಿಚಯಸ್ಥರಿಗೆ ಮಾರಿದ್ದನು. ಕುಲದೀಪ್ ಬಳಿ ಏಳು ಹಸುಗಳಿದ್ದವು. ಹೀಗಾಗಿ ಕೊಟ್ಟಿಗೆಯಲ್ಲಿ ಜಾಗವಿರಲಿಲ್ಲ. ಇನ್ನು ಮೂರು ತಿಂಗಳ ಹಿಂದೆಯೇ ಕುಲದೀಪ್ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದನು. ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿದ್ದರೂ ತನ್ನ ಮಕ್ಕಳು ದುಬಾರಿ ಶುಲ್ಕದ ಖಾಸಗಿ ಶಾಲೆಗಳಿಗೆ ಸೇರಿಸಿದ್ದನು ಎಂದು ತಿಳಿದು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com