ಶ್ರೀಲಂಕಾ ಮೀನುಗಾರರಿಂದ 7 ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ, ದರೋಡೆ

ಸಮುದ್ರ ಮಧ್ಯಭಾದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 2 ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮೀನುಗಾರರು
ಹಲ್ಲೆಗೊಳಗಾದ ಮೀನುಗಾರರು

ನಾಗಪಟ್ಟಿನಂ: ಸಮುದ್ರ ಮಧ್ಯಭಾದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 2 ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮೊದಲ ಪ್ರಕರಣ ಅರುಕತುತಾರೈ ನಲ್ಲಿ ನಡೆದಿದೆ. ಸಂಜೆ 5,45ರ ವೇಳೆಗೆ ಎಸ್ ರಾಮಚಂದ್ರನ್, ಅಯ್ಯಪ್ಪನ್ ಮತ್ತು ಪೊರ್ಸೆಲ್ವನ್ ಹಾಗೂ ದೋಣಿ ಮಾಲೀಕ ಭಾರತೀದಾಸನ್ ತಮ್ಮ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಲಂಕಾ ಮೀನುಗಾರರು ತಮಿಳುನಾಡು ಮೀನುಗಾರರಿದ್ದ ದೋಣಿಗೆ ಬಂದು ಅವರ ಮೇಲೆ ಹಲ್ಲೆ ಮಾಡಿ ಅವರ ದೋಣಿಯಲ್ಲಿದ್ದ ಜಿಪಿಎಸ್ ಮತ್ತು ಹಗ್ಗಗಳನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಆರುಕುತುತಾರೇ ತಲುಪಿದ ತಮಿಳುನಾಡು ಮೀನುಗಾರರು ವೇದರಾಯನ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಭಾರತೀದಾಸನ್ ಮತ್ತು ರಾಮಚಂದ್ರನ್ ಅವರನ್ನು ನಾಗಪಟ್ಟಿಣಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್  ಮಾಡಲಾಗಿದೆ.

ಇನ್ನೂ ಎರಡನೇ ಪ್ರಕರಣದಲ್ಲಿ ಚಕ್ರವರ್ತಿ, ವೆಟ್ರಿವೆಲ್ ಮತ್ತು ರಾಮಸ್ವಾಮಿ ಎಂಬುವರ ಮೇಲೆ ಅರುಕಾತುರೈ ನ ಈಶಾನ್ಯ  ಭಾಗದಲ್ಲಿ ಹಲ್ಲೆ ನಡೆದಿದೆ. ಹೈ ಸ್ಪೀಡ್ ಎಂಜಿನ ನಲ್ಲಿ ಬಂದ ಲಂಕಾ ಮೀನುಗಾರರು ತಮ್ಮ ದೋಣಿಗೆ ನೆಗೆದು ತಮ್ಮ ದೋಣಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ದರೋಡೆ ಮಾಡಿದ್ದಾರೆಂದು ಆರೋಪಿಸಿದ್ದಾರೆ, ಈ ಸಂಬಂಧ ವೇದರಾಯಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com