35 ವರ್ಷದ ವ್ಯಕ್ತಿಯಿಂದ ನಿರಂತರ ಅತ್ಯಾಚಾರ: 14 ವರ್ಷದ ಬಾಲಕಿ ಈಗ 8 ತಿಂಗಳ ಗರ್ಭಿಣಿ

ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಮುಕನೋರ್ವ ಅಟ್ಟಹಾಸಕ್ಕೆ 14 ವರ್ಷದ ಬಾಲಕಿ ನಲುಗಿ ಹೋಗಿದ್ದು, 8 ತಿಂಗಳ ಗರ್ಭಿಣಿಯಾಗಿದ್ದಾಳೆ.
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಶ್ರೀನಗರ: ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಮುಕನೋರ್ವ ಅಟ್ಟಹಾಸಕ್ಕೆ 14 ವರ್ಷದ ಬಾಲಕಿ ನಲುಗಿ ಹೋಗಿದ್ದು, 8 ತಿಂಗಳ ಗರ್ಭಿಣಿಯಾಗಿದ್ದಾಳೆ.

ಹೌದು,, ದಕ್ಷಿಣ ಕಾಶ್ಮೀರದಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯೊಬ್ಬಳನ್ನು ನೆರೆಮನೆಯ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರ ಎಸಗಿದ್ದು, ಬಾಲಕಿ ಈಗ 8 ತಿಂಗಳ ಗರ್ಭಿಣಿಯಾಗಿದ್ದಾಳೆ. 14 ವರ್ಷದ ಬಾಲಕಿಯನ್ನು ಸಂಬಂಧಿಯೂ ಆಗಿರುವ ಅದೇ ಪ್ರದೇಶದ 35 ವರ್ಷದ ವ್ಯಕ್ತಿಯೊಬ್ಬ  ಅತ್ಯಾಚಾರ ಎಸಗಿದ್ದಾನೆ.

ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ಆಕೆಯನ್ನು ಪೋಷಕರು ಆಸ್ಪತ್ರೆ ಕರೆದೊಯ್ದು ಪರಿಶೀಲಿಸಿದಾಗ ಬಾಲಕಿ ಗರ್ಭಿಣಿ ಆಗಿರುವ ವಿಷಯ ಪಾಲಕರಿಗೆ ಗೊತ್ತಾಗಿದೆ. 

ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಏನೇನೋ ನೆಪ ಹೇಳಿಕೊಂಡು ಮನೆಗೆ ಬರುತ್ತಿದ್ದ ನೆರೆಮನೆಯ 35 ವರ್ಷದ ವ್ಯಕ್ತಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂದು ಹೇಳಿದ್ದಾಳೆ. ಪ್ರಸ್ತುತ ಆರೋಪಿ ವಿರುದ್ಧ ಕೇಸ್ ದಾಖಲಾಗಿದ್ದು,  ಬಂಧಿತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com