ಪ್ರವಾಸೋದ್ಯಮ ಸಚಿವರಿಗೆ ಸೋಂಕು: ಉತ್ತರಾಖಂಡ್ ಸಿಎಂ ಸೇರಿ ಎಲ್ಲಾ ಸಚಿವರಿಗೂ ಹೋಮ್ ಕ್ವಾರಂಟೈನ್

ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸಪ್ತಲ್​ ಮಹಾರಾಜ್​​ ಅವರಿಗೆ ತಮ್ಮ ಹೆಂಡತಿಯಿಂದ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದ ಮಾರನೇ ದಿನವೇ ಅಂದರೆ ಭಾನುವಾರ ಸಚಿವರಿಗೂ ಕೊರೋನಾ ಹರಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸಪ್ತಲ್​ ಮಹಾರಾಜ್​​ ಅವರಿಗೆ ತಮ್ಮ ಹೆಂಡತಿಯಿಂದ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದ ಮಾರನೇ ದಿನವೇ ಅಂದರೆ ಭಾನುವಾರ ಸಚಿವರಿಗೂ ಕೊರೋನಾ ಹರಡಿದೆ.

ಸಚಿವ ಸಪ್ತಲ್ ಮಹಾರಾಜ್​ ಒಳಗೊಂಡಂತೆ, ಅವರ ಸಂಪರ್ಕ ಹೊಂದಿದ್ದ 22  ಮಂದಿ, ಅವರ ಮಗ ಮತ್ತು ಸೊಸೆಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಲಾಕ್​ ಡೌನ್​ ವೇಳೆ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ್ ಅವರನ್ನು ಭೇಟಿ ಮಾಡಲು ಕೆಲವರು ದೆಹಲಿಯಿಂದ ಆಗಮಿಸಿದ್ದರು. ಹೀಗಾಗಿ ಡೆಹ್ರಾಡೂನ್ ಆಡಳಿತ ಮಂಡಳಿಯು ಸಚಿವರ ಖಾಸಗಿ ನಿವಾಸವನ್ನು ಕ್ವಾರಂಟೈನ್​ಗೆ ಒಳಪಡಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ಸಚಿವರ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸಪ್ತಲ್ ಮಹಾರಾಜ್ ಮತ್ತು ಅವರ ಪತ್ನಿ ಸೇರಿ ಸುಮಾರು 40 ಮಂದಿಯನ್ನು ಐಸೋಲೇಶನ್​ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಶುಕ್ರವಾರ ಸಚಿವ ಮಹಾರಾಜ್​ ಸಿಎಂ ತ್ರಿವೇಂದ್ರ ಸಿಂಗ್​ ರಾವತ್​ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಈಗ ಮಹಾರಾಜ್​​ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ, ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸೇರಿ ಎಲ್ಲಾ ಸಚಿವರು ಸಹ ಹೋಂ
ಕ್ವಾರಂಟೈನ್​ನಲ್ಲಿ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com