ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ಕ್ಷಿಣಿಸಿದ ನಿಸರ್ಗ ಚಂಡಮಾರುತ: ರೌದ್ರವತಾರದ ನಂತರ ತಣ್ಣಗಾದ ನಿಸರ್ಗ ಚಂಡಮಾರುತಕ್ಕೆ ಮೂವರು ಬಲಿ!

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ನಿಸರ್ಗ ಚಂಡಮಾರುತ ಮುಂಬೈ ಸೇರಿದಂತೆ ಮಹಾರಾಷ್ಟ್ರ ಮತ್ತು ಗುಜರಾತ್ ನ ಕರಾವಳಿ ತೀರದಲ್ಲಿ ಅಪ್ಪಳಿಸಿ ಭಾರೀ ಅನಾಹುತ ಸೃಷ್ಟಿಸಿದೆ. 

ಮುಂಬೈ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ನಿಸರ್ಗ ಚಂಡಮಾರುತ ಮುಂಬೈ ಸೇರಿದಂತೆ ಮಹಾರಾಷ್ಟ್ರ ಮತ್ತು ಗುಜರಾತ್ ನ ಕರಾವಳಿ ತೀರದಲ್ಲಿ ಅಪ್ಪಳಿಸಿ ಭಾರೀ ಅನಾಹುತ ಸೃಷ್ಟಿಸಿದೆ. 

ನಿಸರ್ಗ ಚಂಡಮಾರುತ ರೌದ್ರವತಾರಕ್ಕೆ ಮಹಾರಾಷ್ಟ್ರದಲ್ಲಿ ಹಲವು ಜಿಲ್ಲೆಗಳಲ್ಲಿ ನೂರಾರು ಮನೆಗಳು ಹಾನಿಗೊಂಡಿವೆ. ಗಾಳಿ ಮಳೆಗೆ ಮರಗಳು ಬಿದ್ದ ಪರಿಣಾಮ ಹಲವು ಮನೆಗಳು ಜಖಂಗೊಂಡಿವೆ.

ನಿಸರ್ಗ ಚಂಡಮಾರುತ ಗಂಟೆಗೆ ಸುಮಾರು 90 ರಿಂದ 100 ಕಿ.ಮೀ ವೇಗದಲ್ಲಿ ಮಹಾರಾಷ್ಟ್ರಕ್ಕೆ ಅಪ್ಪಳಿಸಿತ್ತು. ಇನ್ನು ಚಂಡಮಾರುತದಿಂದ ಮುಂಬೈಗೆ ಎದುರಾಗಿದ್ದ ದೊಡ್ಡ ಕಂಟಕವೊಂದು ತಪ್ಪಿದೆ. ನಿಸರ್ಗ ಹೆಚ್ಚು ಹಾನಿ ಮಾಡದೆ ಕ್ಷಿಣಿಸಿರುವುದು ಸಮಾಧಾನದ ಸಂಗತಿಯಾಗಿದೆ. 

ಇನ್ನು ರಾಯ್ ಗಢದಲ್ಲಿ ವಿದ್ಯುತ್ ಕಂಬ ಬಿದ್ದು 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಮನೆ ಕುಸಿದು 65 ವರ್ಷದ ಮಂಜಬಾಯ್ ಮತ್ತು 52 ವರ್ಷದ ಪ್ರಕಾಶ್ ಮೊಕಾರ್ ಮೃತಪಟ್ಟಿದ್ದಾರೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಸ್ಧಗಿತಗೊಳಿಸಲಾಗಿತ್ತು. ಇದೀಗ ಪುರರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com