ಸಾಂಕ್ರಾಮಿಕ ರೋಗಕ್ಕೆ ತುತ್ತಾದವರನ್ನು ಸ್ಥಳಾಂತರಿಸಲು ಸ್ವದೇಶಿ ನಿರ್ಮಿತ ಪಾಡ್ ಏರ್ಪಿಟ್ ಐಎಎಫ್ ಗೆ ಸೇರ್ಪಡೆ

ಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ  ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ  ಸ್ಥಳಾಂತರಿಸಲು ಬಳಸಲಾಗುತ್ತದೆ.
ಪಾಡ್ ಏರ್ಪಿಟ್
ಪಾಡ್ ಏರ್ಪಿಟ್

ನವದೆಹಲಿ: ಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ  ಸ್ಥಳಾಂತರಿಸಲು ಬಳಸಲಾಗುತ್ತದೆ.

"ಐಎಎಫ್ ಪ್ರತ್ಯೇಕ ಸಾರಿಗೆಗಾಗಿ (ಏರ್ಪಿಟ್)ವಾಯುಗಾಮಿ ಪಾರುಗಾಣಿಕಾ  ವಾಹನ- ಪಾಡ್ಅನ್ನು ವಿನ್ಯಾಸ, ಅಭಿವೃದ್ಧಿಪಡಿಸಿ ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗವೆಂದು ಘೋಷಿಸಿದಾಗ, ರೋಗಿಯಿಂದ ಇನ್ನೊಬ್ಬ ವ್ಯಕ್ತಿಗೆ ರೋಗ  ಹರಡುವುದನ್ನು ತಡೆಯಲು  ಸ್ಥಳಾಂತರಿಸುವ ವ್ಯವಸ್ಥೆಯ ಅವಶ್ಯಕತೆಯಿದೆ ಎಂದು ಅದು ಹೇಳಿದೆ.

ದೇಶೀಯವಾಗಿ ವಿನ್ಯಾಸಗೊಳಿಸಲಾದ ಈ ಪಾಡ್  60,000 ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದು ಆಮದು ಮಾಡಿಕೊಂಡಿರುವ ವ್ಯವಸ್ಥೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ವೆಚ್ಚದ್ದಾಗಿದೆ.

ಪ್ರತ್ಯೇಕ ವ್ಯವಸ್ಥೆಯು ಸೂಕ್ತ ಸಂಖ್ಯೆಯಏರ್ ಎಕ್ಸ್ ಚೇಂಜ್ ವ್ಯವಸ್ಥೆ, , ವೈದ್ಯಕೀಯ ಮೇಲ್ವಿಚಾರಣಾ ಸಾಧನಗಳ  ಒಟ್ಟುಗೂಡಿಸುವಿಕೆ ತೀವ್ರನಿಗಾ ರೋಗಿಗಳಿಗೆ ವೆಂಟಿಲೇಟರ್ ಸಹ ಒಳಗೊಡಿರುವುದಾಗಿ ಐಎಎಫ್ ತಿಳಿಸಿದೆ. ಇದಲ್ಲದೆ, ಚಾಲನಾ ಸಿಬ್ಬಂದಿ ಹಾಗೂ ಫ್ಲೋರ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯವನ್ನು ತಡೆಗಟ್ಟಲು ಪಾಡ್ ಪ್ರತ್ಯೇಕ ಕೋಣೆಯಲ್ಲಿ ಹೆಚ್ಚಿನ ಸ್ಥಿರಋಣಾತ್ಮಕ  ಒತ್ತಡವಿರುವಂತೆ ವಿನ್ಯಾಸಗೊಳಿಸಲಾಗಿದೆ."ಎತ್ತರದ ಪ್ರದೇಶ, ಪ್ರತ್ಯೇಕ ಮತ್ತು ದೂರದ ಸ್ಥಳಗಳಿಂದ ಕೋವಿಡ್ ರೀತಿಯಂತಹಾ ಸಾಂಕ್ರಾಮಿಕ ಕಾಯಿಲೆಗಳನ್ನು ಹೊಂದಿರುವ ನಿರ್ಣಾಯಕ ರೋಗಿಗಳನ್ನು ಸ್ಥಳಾಂತರಿಸಲು ಈ ಪಾಡ್ ಅನ್ನು ಬಳಸಲಾಗುತ್ತದೆ" ಎಂದು ಅದು ಹೇಳಿದೆ

ಭಾರತದಲ್ಲಿ ಈವರೆಗೆ 2.56 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸುಮಾರು 7,100 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com