15 ದಿನಗಳಲ್ಲಿ ಭಾರತೀಯ ಸೇನಾಪಡೆಗಳಿಂದ ಉಗ್ರ ಸಂಘಟನೆಯ 8 ಟಾಪ್ ಕಮಾಂಡರ್ ಸೇರಿ 22 ಭಯೋತ್ಪಾದಕರ ಬಲಿ!

ಭಾರತದ ಗಡಿ ನಸುಳಿ ಬಂದು ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿದ್ದ ಉಗ್ರ ಸಂಘಟನೆ 8 ಮಂದಿ ಟಾಪ್ ಕಮಾಂಡರ್ ಗಳು ಸೇರಿದಂತೆ 22 ಮಂದಿ ಉಗ್ರರನ್ನು ಕೇವಲ 15 ದಿನಗಳಲ್ಲಿ ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಗಡಿ ನಸುಳಿ ಬಂದು ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿದ್ದ ಉಗ್ರ ಸಂಘಟನೆ 8 ಮಂದಿ ಟಾಪ್ ಕಮಾಂಡರ್ ಗಳು ಸೇರಿದಂತೆ 22 ಮಂದಿ ಉಗ್ರರನ್ನು ಕೇವಲ 15 ದಿನಗಳಲ್ಲಿ ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ. 

ರಂಜಾನ್ ಹಬ್ಬದ ಬಳಿಕ ಭಾರತೀಯ ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿತ್ತು. ಈ ವೇಳೆ ಗಡಿ ನಸುಳಿ ಬಂದು ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದ್ದ ಉಗ್ರರ ಸಂಘಟನೆಗಳ ಸೇರಿದಂತೆ 22 ಉಗ್ರರನ್ನು ಸೇನಾಪಡೆಗಳು ಹತ್ಯೆ ಮಾಡಿದೆ. ಬಹುತೇಕ ಉಗ್ರರು ಸೇನಾಪಡೆಯ ಕಾರ್ಯಾಚರಣೆಗೆ ಭೀತಿಗೊಳಗಾಗಿ ಯಾವುದೇ ಹಾನಿ ಸೃಷ್ಟಿಸದೆಯೇ ಎನ್'ಕೌಂಟರ್'ಗೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ಮೇ.25 ರಂದು ನಡೆದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಆದಿಲ್ ಅಹ್ಮದ್ ವಾನಿ ಹಾಗೂ ಎಲ್'ಇಟಿ ಮುಖ್ಯಸ್ಥ ಶಾಹೀನ್ ಅಹ್ಮದ್ ಥೊಕೆರ್ ಎಂಬುವವನ್ನು ಹತ್ಯೆ ಮಾಡಲಾಗಿತ್ತು. ಇದಾಗ ಬಳಿಕ ಕುಲ್ಗಾಂನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್'ನ ಕಮಾಂಡರ್ ಪರ್ವೈಜ್ ಅಹ್ಮದ್ ಪಂಡಿತ್ ಹಾಗೂ ಜೆಇಎ ಕಮಾಂಡರ್ ಶಾಕಿರ್ ಅಹ್ಮತ್ ಇಟೂನನ್ನು ಹತ್ಯೆ ಮಾಡಲಾಗಿತ್ತು. 

ಜೂನ್. 2 ರಂದು ಅವಂತಿಪೊರಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಇಎಂ ಸಂಘಟನೆಯ ಮತ್ತೊಬ್ಬ ಕಮಾಂಡರ್ ಆಖಿಬ್ ರಂಜಾನ್ ಹಾಗೂ ಮೊಹಮ್ಮದ್ ಮಖ್ಬೂಲ್ ಚೋಪಾನನ್ನು ಹತ್ಯೆ ಮಾಡಲಾಗಿತ್ತು. ಜೂನ್. 2 ರಂದು ಮತ್ತೊಂದು ಕಾರ್ಯಾಚರಣೆಯಲ್ಲಿ ಜೆಇಎಂ ಟಾಪ್ ಕಮಾಂಡರ್ ಎಂದೇ ಹೇಳಲಾಗುತ್ತಿದ್ದ ಫೌಝಿ ಭಾಯ್, ಮಂಝೂರ್ ಅಹ್ಮದ್ ಕಾರ್, ಜವೈದ್ ಅಹ್ಮದ್ ಝರ್ಗಾ ನನ್ನು ಹತ್ಯೆ ಮಾಡಲಾಗಿತ್ತು. 

ಜೂನ್ 7 ರಂದು ಶೋಪಿಯಾನ್ ನಲ್ಲಿ ನಡೆದ ಎನ್'ಕೌಂಟರ್'ನಲ್ಲಿ ಟಾಪ್ ಕಮಾಂಡರ್ ಇಶ್ಫಾಕ್ ಅಹ್ಮದ್ ಇತೂ, ಓವೈಸಿ ಅಹ್ಮದ್ ಮಲಿಕ್, ಆದಿಲ್ ಅಹ್ಮದ್ ಮಿರ್, ಬಿಲಾರ್ ಅಹ್ಮದ್ ಭಟ್, ಸಾಜದ್ ಅಹ್ಮದ್ ವಾಗಯ್ ನನ್ನು ಹತ್ಯೆ ಮಾಡಲಾಗಿತ್ತು. 

ಇದೇ ಜೂನ್. 7 ರಂದು ನಡೆದ ಎರಡನೇ ಎನ್'ಕೌಂಟರ್ ನಲ್ಲಿ ಉಮರ್ ಮೊಹುಯುದ್ದೀನ್ ದೋಬಿ, ಎಲ್ಇಟಿ ಟಾಪ್ ಕಮಾಂಡರ್ ರಯೀಸ್ ಅಹ್ಮದ್ ಖಾನ್, ಹಿಜ್ಬುಲ್ ಮುಜಾಹಿದ್ದೀನ್ ಸಕ್ಲೈನ್ ಅಹ್ಮ್ ವಾಗಾಯ್, ವಕೀಲ್ ಅಹ್ಮದ್ ನಾಯ್ಕೂ ನನ್ನು ಹತ್ಯೆ ಮಾಡಲಾಗಿತ್ತು. 

ಫೌಜು ಭಾಯಿಯನ್ನು ಹೊರತುಪಡಿಸಿ ಉಳಿದೆಲ್ಲಾ  ಭಯೋತ್ಪಾದಕರೂ ಜಮ್ಮು–ಕಾಶ್ಮೀರದ ಶೋಪಿಯಾನ್, ಕುಲ್ಗಾಂ ಮತ್ತು ಪುಲ್ವಾಮಾದವರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com