ಭಾರತಕ್ಕೆ 100 ವೆಂಟಿಲೇಟರ್ ಹಸ್ತಾಂತರಿಸಿದ ಅಮೆರಿಕಾ

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕಾ 100 ವೆಂಟಲೇಟರ್ ಗಳನ್ನು ಪೂರೈಸಿದೆ.ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಅಮೆರಿಕಾ ರಾಯಬಾರಿ ಕೆನ್ನಿತ್ ಐ ಜಸ್ಟರ್ ಅಮೆರಿಕಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯಿಂದ 100 ವೆಂಟಿಲೇಟರ್ ಗಳನ್ನು ಭಾರತಕ್ಕೆ ಹಸ್ತಾಂತರಿಸಿದರು.
ವೆಂಟಿಲೇಟರ್ ಹಸ್ತಾಂತರಿಸಿದ ಭಾರತದಲ್ಲಿನ ಅಮೆರಿಕಾ ರಾಯಬಾರಿ ಕೆನ್ನಿತ್ ಐ ಜಸ್ಟರ್
ವೆಂಟಿಲೇಟರ್ ಹಸ್ತಾಂತರಿಸಿದ ಭಾರತದಲ್ಲಿನ ಅಮೆರಿಕಾ ರಾಯಬಾರಿ ಕೆನ್ನಿತ್ ಐ ಜಸ್ಟರ್

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕಾ 100 ವೆಂಟಲೇಟರ್ ಗಳನ್ನು ಪೂರೈಸಿದೆ.ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತದಲ್ಲಿನ ಅಮೆರಿಕಾ ರಾಯಬಾರಿ ಕೆನ್ನಿತ್ ಐ ಜಸ್ಟರ್ ಅಮೆರಿಕಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯಿಂದ 100 ವೆಂಟಿಲೇಟರ್ ಗಳನ್ನು ಭಾರತಕ್ಕೆ ಹಸ್ತಾಂತರಿಸಿದರು.

ಕೊರೋನಾವೈರಸ್ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತಕ್ಕೆ ವೆಂಟಿಲೇಟರ್ ಗಳನ್ನು ಪೂರೈಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ನೀಡಿದ್ದ ಭರವಸೆಯಂತೆ ಮೊದಲ ಹಂತದ ವೆಂಟಿಲೇಟರ್ ಗಳು ಬಂದಿವೆ. ಇವುಗಳನ್ನು ಅಮೆರಿಕಾ ಮೂಲದ ಜೊಲ್ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತಯಾರು ಮಾಡಿದೆ. 

ಅಮೆರಿಕಾದದಿಂದ 100 ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಏರ್ ಇಂಡಿಯಾ ವಿಮಾನದ ಮೂಲಕ ವೆಂಟಿಲೇಟರ್ ಬಂದಿದ್ದು, ಭಾರತೀಯ ರೆಡ್ ಕ್ರಾಸ್ ಸೂಸೈಟಿಯಲ್ಲಿ ಸಣ್ಣ ಕಾರ್ಯಕ್ರಮದ ನಂತರ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೆಂಟಿಲೇಟರ್ ಗಳು ಪ್ರಮುಖ ವೈದ್ಯಕೀಯ ಸಲಕರಣೆಯಾಗಿದೆ. ಉತ್ತಮ ಸ್ನೇಹಿತನಾಗಿರುವ ಭಾರತಕ್ಕೆ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡುವುದಾಗಿ ಮೇ 16 ರಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com