ಕೋವಿಡ್-19: ವೈದ್ಯರಿಗೆ ಬೆದರಿಕೆ ಹಾಕಿದ್ದ ದೆಹಲಿ ಸರ್ಕಾರಕ್ಕೆ ಸುಪ್ರೀಂ ತರಾಟೆ 

ಕೋವಿಡ್-19 ಗೆ ಸಂಬಂಧಿಸಿದಂತೆ ವೈದ್ಯರಿಗೆ ಬೆದರಿಕೆ ಹಾಕಿದ್ದ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 
ಕೋವಿಡ್-19: ವೈದ್ಯರಿಗೆ ಬೆದರಿಕೆ ಹಾಕಿದ್ದ ದೆಹಲಿ ಸರ್ಕಾರಕ್ಕೆ ಸುಪ್ರೀಂ ತರಾಟೆ
ಕೋವಿಡ್-19: ವೈದ್ಯರಿಗೆ ಬೆದರಿಕೆ ಹಾಕಿದ್ದ ದೆಹಲಿ ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ: ಕೋವಿಡ್-19 ಗೆ ಸಂಬಂಧಿಸಿದಂತೆ ವೈದ್ಯರಿಗೆ ಬೆದರಿಕೆ ಹಾಕಿದ್ದ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಹೆಲ್ತ್ ಕೇರ್ ಕುರಿತ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ದೆಹಲಿ ಸರ್ಕಾರ ನರ್ಸ್, ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಬೆದರಿಕೆ ಹಾಕಿತ್ತು. ಕೋವಿಡ್-19 ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಶವಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ (ಸುಮೋಟೋ) ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್ ನ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ಎಂ.ಆರ್ ಶಾ, ನ್ಯಾ.ಸಂಜಯ್ ಕಿಶನ್ ನೇತೃತ್ವದ ಪೀಠ,  ಸತ್ಯ ನುಡಿದ ವೈದ್ಯರಿಗೆ ಬೆದರಿಕೆ ಹಾಕಬೇಡಿ ಎಂದು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಬೆದರಿಕೆ ಹಾಕಬೇಡಿ, ಅವರಿಗೆ ಬೆಂಬಲ ನೀಡಿ, ದೆಹಲಿ ಏನು ಮಾಡಿದೆ? ವೈದ್ಯರು, ನರ್ಸ್ ಗಳನ್ನು ರಕ್ಷಿಸಿ, ಅವರು ಕೊರೋನಾ ಯೋಧರು, ನಿಮಗೆ (ದೆಹಲಿ ಸರ್ಕಾರಕ್ಕೆ) ಸತ್ಯ ಹೊರಬರುವುದು ಬೇಕಿಲ್ಲ. ಆದರೆ ಹಲವು ವಿಡಿಯೋಗಳು ಬಹಿರಂಗವಾಗಿವೆ ಎಂದು ಕೋರ್ಟ್ ಹೇಳಿದೆ. 

ನಿಮ್ಮ ಆಸ್ಪತ್ರೆಗಳ ದಯನೀಯ ಪರಿಸ್ಥಿತಿಯನ್ನು ವಿಡಿಯೋ ಮಾಡಿದ್ದ ವೈದ್ಯರನ್ನೇಕೆ ಅಮಾನತುಗೊಳಿಸಿದ್ದೀರಿ?ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ. ಈ ಸಂಬಂಧ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com