24 ಗಂಟೆಗಳಲ್ಲಿ 8 ಮಂದಿ ಉಗ್ರರನ್ನು ಸದೆಬಡಿದ ಭಾರತೀಯ ಸೇನಾಪಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡು ಪ್ರದೇಶಗಳಲ್ಲಿ ಎನ್'ಕೌಂಟರ್ ನಡೆಸಲಾಗಿದ್ದು, 8 ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಅಧಿಕಾರಿಗಳು
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಅಧಿಕಾರಿಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡು ಪ್ರದೇಶಗಳಲ್ಲಿ ಎನ್'ಕೌಂಟರ್ ನಡೆಸಲಾಗಿದ್ದು, 8 ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಲೆಫ್ಟಿನೆಂಟ್ ಜನರಲ್ ಬಗ್ಗಾವಲ್ಲಿ ಸೋಮಶೇಖರ್ ರಾಜು ಅವರು, ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಹಾಗೂ ಶೋಪಿಯಾನ್ ಎರಡೂ ಜಿಲ್ಲೆಗಳಲ್ಲಿಯೂ ಎರಡು ಪ್ರತ್ಯೇಕ ಎನ್'ಕೌಂಟರ್ ನಡೆಸಲಾಗಿದ್ದು, 8 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಶೋಪಿಯಾನ್ ಜಿಲ್ಲೆ ಪ್ಯಾಂಪೋರಾದಲ್ಲಿರುವ ಮಸೀದಿಯಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಸಾವು-ನೋವು, ನಷ್ಟಗಳು ಸಂಭವಿಸಿಲ್ಲ. ಕಾಶ್ಮೀರಿಗರು ಶಾಂತಿಯನ್ನು ನಂಬಿದ್ದು, ಅವರ ನಂಬಿಕೆಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಕಾಶ್ಮೀರಿಗರ ಈ ನಂಬಿಕೆಯಿಂದಲೇ ನಾವು ಈ ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮುಂದಿನ ಕೆಲ ತಿಂಗಳಲ್ಲಿ ಇಂತಹದ್ದೇ ಮತ್ತಷ್ಟು ಕಾರ್ಯಾಚರಣೆಗಳು ನಡೆಯಲಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೊಳ್ಳುವ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. 

ಉಗ್ರ ಸಂಘಟನೆಗೆ ಕೆಲ ದಿನಗಳ ಹಿಂದಷ್ಟೇ 49 ಮಂದಿ ಸೇರ್ಪಡೆಗೊಂಡಿದ್ದರು. ಇದರಲ್ಲಿ ಈ ವರೆಗೂ 27 ಮಂದಿಯನ್ನು ಹತ್ಯೆ ಮಾಡಲಾಗಿದೆ. ಯುವಕರನ್ನು ಹತ್ಯೆ ಮಾಡುವುದು ನಮಗೆ ಸಂತೋಷವನ್ನು ನೀಡುವುದಿಲ್ಲ. ಆದರೆ, ಯಾರಾದರೂ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಇತರರಿಗೆ ಹಾನಿಯುಂಟು ಮಾಡಿದರೆ, ನಮ್ಮ ಪ್ರತಿಕ್ರಿಯೆಯನ್ನು ಕಾರ್ಯಾಚರಣೆ ಮೂಲಕ ನೀಡಲಾಗುತ್ತಿದೆ. 

ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ, ಇತ್ತೀಚೆಗೆ ಕಳೆದ ಐದೂವರೆ ತಿಂಗಲುಗಳು ನಾವು ಹೊಂದಿದ್ದ ಅತ್ಯಂತ ಶಾಂತಿಯುತ ತಿಂಗಳುಗಳಲ್ಲಿ ಒಂದಾದಿಗೆ. ಇವು ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದ ದಿನಗಳಾಗಿವೆ. ಇದು ಅತ್ಯಂತ ಸಂತೋಷವನ್ನು ನೀಡುತ್ತದೆ. ಜನರ ಸಹಕಾರದಿಂದ ಇದು ಸಾಧ್ಯವಾಗಿದೆ.

ಪಾಕಿಸ್ತಾನದ ಭಯೋತ್ಪಾದಕ ವ್ಯವಹಾರಗಳು, ಪ್ರಚೋದನಾಕಾರಿ ಬೆಳವಣಿಗೆಗಳ ನಡವೆಯೂ ಶಾಂತಿಯುತ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ನಮ್ಮ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾಕಿಸ್ತಾನ ಸಂಸ್ಥೆಗಳು ಹಿಂಸಾಚಾರ ಹಾಗೂ ವಿನಾಶಗಳನ್ನು ಯಾವ ರೀತಿ ತಮ್ಮ ಯೋಜನೆಗಳಿಗೆ ಬಳಸಿಕೊಳ್ಳುತ್ತಿತ್ತು ಎಂಬುದನ್ನು ಯುವಕರು ಅರಿತಂತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com