ಗಲ್ವಾನ್ ಕಣವೆ ಎಂದಿಗೂ ನಮ್ಮದು: ಚೀನಾದ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು- ಶಿವಸೇನೆ

ಲಡಾಖ್ ಗಡಿಯಲ್ಲಿರುವ  ಗಲ್ವಾನ್ ಕಣಿವೆ ಪ್ರದೇಶ ನಮ್ಮದು ಎನ್ನುತ್ತಿರುವ ಚೀನಾದ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಶಿವಸೇನಾ ಉಪ ಮುಖಂಡ ಪ್ರಿಯಾಂಕಾ ಚತುರ್ವೇದಿ ಶನಿವಾರ ಒತ್ತಾಯಿಸಿದ್ದಾರೆ
ಚೀನಾ ಸೇನಾಪಡೆಗಳ ಚಿತ್ರ
ಚೀನಾ ಸೇನಾಪಡೆಗಳ ಚಿತ್ರ

ಮುಂಬೈ: ಲಡಾಖ್ ಗಡಿಯಲ್ಲಿರುವ  ಗಲ್ವಾನ್ ಕಣಿವೆ ಪ್ರದೇಶ ನಮ್ಮದು ಎನ್ನುತ್ತಿರುವ ಚೀನಾದ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಶಿವಸೇನಾ ಉಪ ಮುಖಂಡ ಪ್ರಿಯಾಂಕಾ ಚತುರ್ವೇದಿ ಶನಿವಾರ ಒತ್ತಾಯಿಸಿದ್ದಾರೆ.

ಭಾರತದ ಭೂ ಪ್ರದೇಶವನ್ನು ಯಾರೂ ಅಕ್ರಮಿಸಿಕೊಳ್ಳಲು ಬಿಡಲ್ಲ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ ಆದರೆ, ಗಲ್ವಾನ್ ಕಣಿವೆ ನಮ್ಮದು ಎಂದು ಚೀನಾ ಹೇಳುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ, ಗಲ್ವಾನ್ ಕಣಿವೆಯನ್ನು ನಾವು ಬಿಟ್ಟುಕೊಟ್ಟಿದೇವೆಯೇ ಅಥವಾ ಪಿಎಲ್ ಎನ್ನು ಅಲ್ಲಿಂದ ನಾವು ಹೊರಹಾಕಿದ್ದೇವೆಯೇ ಎಂಬುದನ್ನು ರಾಷ್ಟ್ರದ ಜನತೆ ತಿಳಿಯಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಸೋಮವಾರ ರಾತ್ರಿ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆ ಬಳಿ ಚೀನಾ ಸೇನಾಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.  

ಐದು ದಶಕಗಳ ಬಳಿಕ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ದೊಡ್ಡ ಘರ್ಷಣೆ ಇದಾಗಿದ್ದು, ಚೀನಾದ ಆಕ್ರಮಣ ನೀತಿ ಬಗ್ಗೆ ಭಾರತದಿಂದ ತೀವ್ರ ಟೀಕೆ ವ್ಯಕ್ತವಾದ ಬಳಿಕ ಗಲ್ವಾನ್ ಕಣಿವೆ ಎಂದಿಗೂ ನಮ್ಮದು ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಪ್ರತಿಪಾದಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com