ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಪ್ರಸ್ತುತ ಭಾರತ ಚೀನಾ ವಿರುದ್ಧ ಎರಡು ಹೋರಾಟಗಳನ್ನು ಮಾಡುತ್ತಿದೆ: ಕೇಜ್ರಿವಾಲ್ 

ಭಾರತ ಪ್ರಸ್ತುತ ಚೀನಾ ವಿರುದ್ಧ ಎರಡು ಹೋರಾಟಗಳನ್ನು  ಮಾಡುತ್ತಿದೆ.ನೆರೆಯ ರಾಷ್ಟ್ರದಿಂದ ಬಂದಿರುವ ಕೊರೋನಾ ವೈರಸ್ ವಿರುದ್ಧ ಒಂದಾದರೆ,ಮತ್ತೊಂದು ಗಡಿ ವಿಚಾರವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ

ನವದೆಹಲಿ: ಭಾರತ ಪ್ರಸ್ತುತ ಚೀನಾ ವಿರುದ್ಧ ಎರಡು ಹೋರಾಟಗಳನ್ನು  ಮಾಡುತ್ತಿದೆ.ನೆರೆಯ ರಾಷ್ಟ್ರದಿಂದ ಬಂದಿರುವ ಕೊರೋನಾ ವೈರಸ್ ವಿರುದ್ಧ ಒಂದಾದರೆ,ಮತ್ತೊಂದು ಗಡಿ ವಿಚಾರವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ನಮ್ಮ ದೇಶದ 20 ಯೋಧರು ಧೈರ್ಯ ಗುಂದಲಿಲ್ಲ, ನಾವು ಕೂಡಾ ಹಿಂದೆ ಸರಿಯುವುದಿಲ್ಲ,ಚೀನಾದ ವಿರುದ್ಧ ಎರಡು ಹೋರಾಟಗಳಲ್ಲಿ ಗೆಲುವು ಸಾಧಿಸುತ್ತೇವೆ. ಇದು ರಾಜಕೀಯದ ವೇಳೆಯಲ್ಲಾ, ನಾವೆಲ್ಲರೂ ಈ ಯುದ್ದಗಳನ್ನು  ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನದ ಬಗ್ಗೆ ಮಾತನಾಡಿರುವ ಕೇಜ್ರಿವಾಲ್,  ರಾಷ್ಟ್ರ ರಾಜಧಾನಿಯಲ್ಲಿ ಮೂರು ಪಟ್ಟು ಕೊರೋನಾವೈರಸ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ.ಮನೆಯಲ್ಲಿ ಪ್ರತ್ಯೇಕಿಸಿರುವ ಕೋವಿಡ್-19 ರೋಗಿಗಳಿಗೆ ನಾಡಿ ಅಕ್ಸಿಮೀಟರ್ ಗಳನ್ನು( ಫಲ್ಸ್  ಆಕ್ಸಿಮೀಟರ್ಸ್ )  ನೀಡಲಾಗುವುದು ಎಂದರು. ಸುಮಾರು 12 ಸಾವಿರ ಜನರನ್ನು ಮನೆಯಲ್ಲಿ ಪ್ರತ್ಯೇಕಿಸಲಾಗಿದ್ದು,ಅಂತವರಿಗೆ ಆಮ್ ಆದ್ಮಿ ಸರ್ಕಾರ ನಾಡಿ ಆಕ್ಸಿಮೀಟರ್ಸ್  ನೀಡಲಿದೆ ಎಂದು ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹರಡುವವವರನ್ನು ಬಂಧಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಹಾಗೂ ದೆಹಲಿ ಸರ್ಕಾರ ಜೊತೆಗೆಯಾಗಿ ಕೆಲಸ ಮಾಡುತ್ತಿರುವುದಾಗಿ ಕೇಜ್ರಿವಾಲ್ ತಿಳಿಸಿದರು.

Related Stories

No stories found.

Advertisement

X

Advertisement

X
Kannada Prabha
www.kannadaprabha.com