ಆರ್ ಜೆಡಿಗೆ ತೀವ್ರ ಹಿನ್ನಡೆ: ಐವರು ಎಂಎಲ್ ಸಿಗಳ ರಾಜೀನಾಮೆ, ಜೆಡಿಯು ಸೇರ್ಪಡೆ

ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿಗೆ ತೀವ್ರ ಹಿನ್ನಡೆಯಾಗಿದ್ದು, ಆರ್ ಜೆಡಿಯ ಐವರು ಎಂಎಲ್ ಸಿಗಳು ಮಂಗಳವಾರ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರಿದ್ದಾರೆ.

Published: 23rd June 2020 04:20 PM  |   Last Updated: 23rd June 2020 04:20 PM   |  A+A-


Lalu Prasad

ಲಾಲು ಪ್ರಸಾದ್ ಯಾದವ್

Posted By : Lingaraj Badiger
Source : PTI

ಪಾಟ್ನಾ: ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿಗೆ ತೀವ್ರ ಹಿನ್ನಡೆಯಾಗಿದ್ದು, ಆರ್ ಜೆಡಿಯನ ಎಂಟು ಎಂಎಲ್ ಸಿಗಳ ಪೈಕಿ ಐವರು ಮಂಗಳವಾರ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರಿದ್ದಾರೆ.

ಆರ್ ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಸಂಸ್ಥಾಪಕ ಸದಸ್ಯರೂ ಆಗಿದ್ದ ರಘುವಂಶ ಪ್ರಸಾದ್ ಸಿಂಗ್ ಹಾಗೂ ಐವರು ಎಂಎಲ್ ಸಿಗಳು ಇಂದು ಲಾಲು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಬಿಹಾರದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಆರ್ ಜೆಡಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ ಎಂ ಖಮರ್ ಅಲಮ್, ಸಂಜಯ್ ಪ್ರಸಾದ್, ರಾಧ ಚರಣ್ ಸೇಠ್, ರಣವಿಜಯ್ ಕುಮಾರ್ ಸಿಂಗ್ ಮತ್ತು ದಿಲಿಪ್ ರೈ ಅವರು ವಿಧಾನ ಪರಿಷತ್ ಹಂಗಾಮಿ ಸಭಾಧ್ಯಕ್ಷ ಅವದೀಶ್ ನರೈನ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಐವರು ವಿಧಾನ ಪರಿಷತ್ ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸಭಾಧ್ಯಕ್ಷರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp