ಕೋವಿಡ್-19 ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ನವ ದಂಪತಿ!

ಇಡೀ ದೇಶ ಮಾರಕ ಕೊರೋನಾ ವೈರಸ್ ಹಾವಳಿಯಿಂದ ನರಳುತ್ತಿದ್ದು, ಬೆಡ್ ಗಳು, ಆಕ್ಸಿಜನ್ ವ್ಯವಸ್ಥೆ ಇಲ್ಲದೆ ಹಲವಾರು ರೋಗಿಗಳು ಸಾವು-ನೋವಿನ ನಡುವೆ ನರಳುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಹೊಸದಾಗಿ ಮದುವೆಯಾದ ಜೋಡಿಯೊಂದು ಕೋವಿಡ್ ಕೇಂದ್ರಕ್ಕೆ ಬೆಡ್ ಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

Published: 24th June 2020 03:03 PM  |   Last Updated: 24th June 2020 03:03 PM   |  A+A-


Newly-wed couple donates 50 beds to Covid centre

ಬೆಡ್ ವಿತರಣೆ ಮಾಡಿದ ನವ ವಿವಾಹಿತ ಜೋಡಿ

Posted By : srinivasamurthy
Source : PTI

ಮುಂಬೈ: ಇಡೀ ದೇಶ ಮಾರಕ ಕೊರೋನಾ ವೈರಸ್ ಹಾವಳಿಯಿಂದ ನರಳುತ್ತಿದ್ದು, ಬೆಡ್ ಗಳು, ಆಕ್ಸಿಜನ್ ವ್ಯವಸ್ಥೆ ಇಲ್ಲದೆ ಹಲವಾರು ರೋಗಿಗಳು ಸಾವು-ನೋವಿನ ನಡುವೆ ನರಳುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಹೊಸದಾಗಿ ಮದುವೆಯಾದ ಜೋಡಿಯೊಂದು ಕೋವಿಡ್ ಕೇಂದ್ರಕ್ಕೆ ಬೆಡ್ ಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

ಮಹಾರಾಷ್ಟ್ರದ ವಾಸೈನಲ್ಲಿರುವ ನಂದಕುಲ ಗ್ರಾಮದ ನವ ವಿವಾಹಿತ ಜೋಡಿಯೊಂದು  ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎರಿಕ್ ಆ್ಯಂಟನ್ ಲೊಬೊ(28 ವರ್ಷ) ಹಾಗೂ ಮೆರ್ಲಿನ್(27) ಎಂಬ ಜೋಡಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಿಗೆ ಮಾತನಾಡಿರುವ ವರ ಲೋಬೋ, ಮದುವೆಗೆ ಸಾಮಾನ್ಯವಾಗಿ ಸುಮಾರು 2 ಸಾವಿರ ಮಂದಿ ಸೇರುವವರಿದ್ದರು. ಅಲ್ಲದೆ ವೈನ್ ಹಾಗೂ ಒಳ್ಳೆಯ ಊಟ ಇಲ್ಲವೆಂದರೆ ಮದುವೆ ಅಪೂರ್ಣವೆಂದೇ ಅರ್ಥ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಕೊರೋನಾ ಸಾಂಕ್ರಾಮಿಕದ ಹೊತ್ತಿನಲ್ಲಿ ಮದುವೆಗೆ ಇಷ್ಟು ಜನ ಸೇರುವಂತಿಲ್ಲ. ಹೀಗಾಗಿ ಈ ಹಣವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲು ತೀರ್ಮಾನಿದೆವು ಎಂದು ಹೇಳಿದ್ದಾರೆ.

ಲೊಬೊ ಮತ್ತು ಮರ್ಲಿನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಶಾಸಕ ಕ್ಷಿತಿಜಿ ಠಾಕೂರ್ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ಶಾಸಕರು, ಜಿಲ್ಲಾಧಿಕಾರಿ ಡಾ. ಕೈಲಾಸ್ ಶಿಂಧೆ ಅವರ ಗಮನಕ್ಕೆ ತಂದರು. ಜೋಡಿಯ ಐಡಿಯಾಕ್ಕೆ ಜಿಲ್ಲಾಧಿಕಾರಿ ಕೂಡ ಸಾಥ್ ನೀಡಿದ್ದು, ವಿಶೇಷ ಯೋಜನೆಗೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್ ನೀಡಿದರು.

ಆ ನಂತರ ಜೋಡಿ ವಾಸೈನಲ್ಲಿರುವ ಆಸ್ಪತ್ರೆಯ ಬೆಡ್ ತಯಾರು ಮಾಡುವವರ ಬಳಿ ಹೋಗಿ ವಿವರಿಸಿದ್ದಾರೆ. ಅಲ್ಲದೆ ಉತ್ತಮವಾದ ಹಾಸಿಗೆ, ಹೊದಿಕೆ, ತಲೆದಿಂಬು, ಬೆಡ್‍ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ತಯಾರು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಅಗತ್ಯವಾಗಿ ಬೇಕಾಗುವ ಆಕ್ಸಿಜನ್ ಸಿಲಿಂಡರ್ ಕೂಡ ನೀಡಲು ತೀರ್ಮಾನಿಸದೆವು ಎಂದು ಲೊಬೊ ಹೇಳಿದ್ದಾರೆ.

ಮದುವೆಯಲ್ಲೂ ಸಾಮಾಜಿಕ ಜವಾಬ್ದಾರಿ ಪ್ರದರ್ಶನ
ಇನ್ನು ಕೊರೋನಾ ವೈರಸ್ ಹಿನ್ನೆಲೆಯಿಂದಾಗಿ ಮದುವೆಗೆ ಕೇವಲ 22 ಮಂದಿಯಷ್ಟೇ ಭಾಗಿಯಾಗಿದ್ದು ಎಲ್ಲರೂ ಮಾಸ್ಕ್ ಧರಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಲಾಗಿತ್ತು. ಪಲ್ಘಾರ್ ಜಿಲ್ಲೆಯಲ್ಲಿ ಸರಿ ಸುಮಾರು 90 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸುಮಾರು 1, 500ಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಹೀಗಾಗಿ ನಾವು ಕೋವಿಡ್ ಆಸ್ಪತ್ರೆಗೆ ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡುವ ನಿರ್ಧಾರಕ್ಕೆ ಬಂದೆವು ಎಂದು ಲೋಬೋ ವಿವರಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp