ತಮಿಳುನಾಡು: ಡಿಎಂಕೆ ಶಾಸಕ ಅರಸುಗೆ ಕೊರೋನಾ ಪಾಸಿಟಿವ್

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಜನಪ್ರತಿನಿಧಿಗಳಿಗೂ ಕಂಟಕವಾಗಿ ಕಾಡುತ್ತಿದ್ದು, ಈಗಾಗಲೇ ಓರ್ವ ಶಾಸಕನನ್ನು ಬಲಿ ಪಡೆದ ಮಹಾಮಾರಿ ಈಗ ಮತ್ತೊಬ್ಬ ಶಾಸಕರಿಗೆ ವಕ್ಕರಿಸಿದೆ.

Published: 27th June 2020 03:11 PM  |   Last Updated: 27th June 2020 03:11 PM   |  A+A-


arasu1

ಟಿಆರ್ ಅರಸು

Posted By : lingaraj
Source : IANS

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ವೈರಸ್ ಜನಪ್ರತಿನಿಧಿಗಳಿಗೂ ಕಂಟಕವಾಗಿ ಕಾಡುತ್ತಿದ್ದು, ಈಗಾಗಲೇ ಓರ್ವ ಶಾಸಕನನ್ನು ಬಲಿ ಪಡೆದ ಮಹಾಮಾರಿ ಈಗ ಮತ್ತೊಬ್ಬ ಶಾಸಕರಿಗೆ ವಕ್ಕರಿಸಿದೆ.

ಡಿಎಂಕೆ ಶಾಸಕ ಆರ್ ಟಿ ಅರಸು ಅವರಿಗೆ ಶನಿವಾರ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಸು ಅವರು ಶೀಘ್ರ ಗುಣಮುಖರಾಗಿ, ಸಾರ್ವಜನಿಕ ಸೇವೆ ಮುಂದುವರೆಸಲಿ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಟ್ಟೀಟ್ ಮೂಲಕ ಹಾರೈಸಿದ್ದಾರೆ.

ಅರಸು ಅವರು ಚೆಯ್ಯುರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕೊರೋನಾ ವೈರಸ್ ಸೋಂಕು ತಗುಲಿದ ಎರಡನೇ ಶಾಸಕರಾಗಿದ್ದಾರೆ. 

ಇತ್ತೀಚಿಗೆ ಡಿಎಂಕೆ ಶಾಸಕ ಜೆ ಅನ್ಬಳಗನ್ ಅವರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದರು.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp