ಪುಣೆ: ನಿದ್ದೆಗೆ ಜಾರಿದ ಉಬರ್ ಚಾಲಕ, ತಾನೇ ಕಾರು ಚಲಾಯಿಸಿದ ಮಹಿಳೆ!

ಉಬರ್ ಜಾಲಕನೊಬ್ಬ ಕ್ಯಾಬ್ ಚಲಾಯಿಸುವುದನ್ನು ಬಿಟ್ಟು ನಿದ್ದೆಗೆ ಜಾರಿದ್ದರಿಂದ 28 ವರ್ಷದ ಗ್ರಾಹಕಿ ಬೇರೆ ವಿಧಿ ಇಲ್ಲದೆ ತಾನೇ ಸ್ವತಃ ಕಾರು ಚಾಲನೆ ಮಾಡಿ ಮನೆ ತಲುಪಿದ ಭಯಾನಕ ಘಟಮೆ ಮುಂಬೈನಲ್ಲಿ ನಡೆದಿದೆ. 
ಉಬರ್ ಕ್ಯಾಬ್
ಉಬರ್ ಕ್ಯಾಬ್

ಪುಣೆ: ಉಬರ್ ಜಾಲಕನೊಬ್ಬ ಕ್ಯಾಬ್ ಚಲಾಯಿಸುವುದನ್ನು ಬಿಟ್ಟು ನಿದ್ದೆಗೆ ಜಾರಿದ್ದರಿಂದ 28 ವರ್ಷದ ಗ್ರಾಹಕಿ ಬೇರೆ ವಿಧಿ ಇಲ್ಲದೆ ತಾನೇ ಸ್ವತಃ ಕಾರು ಚಾಲನೆ ಮಾಡಿ ಮನೆ ತಲುಪಿದ ಭಯಾನಕ ಘಟಮೆ ಮುಂಬೈನಲ್ಲಿ ನಡೆದಿದೆ. 

ಕಳೆದ ಫೆಬ್ರವರಿ 21ರಂದು ಈ ಘಟನೆ ನಡೆದಿದ್ದು, ಉಬರ್ ಕ್ಯಾಬ್ ಬುಕ್ ಮಾಡಿದ್ದ ತೇಜಸ್ವಿನಿ ದಿವ್ಯ ಎಂಬುವವರು ಜಾಲಕ ನಿದ್ದೆಗೆ ಜಾರಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ತೇಜಸ್ವಿನಿ ಅವರು ಪುಣೆಯಿಂದ ಮುಂಬೈಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಮುಂಬೈನಿಂದ ಪುಣೆಗೆ ತಲುಪಲು ಸುಮಾರು 3 ತಾಸು ಕಾರು ಚಲಾಯಿಸಬೇಕಾಗುತ್ತದೆ. ನಿಗದಿಯಂತೆ ಕ್ಯಾಬ್ ಚಾಲಕ ಸಮಯಕ್ಕೆ ಸರಿಯಾಗಿ ಪಿಕಪ್ ಪಾಂಯ್ಟ್ ಗೆ ತಲುಪಿದ್ದಾನೆ. ಮಹಿಳೆ ಕಾರನ್ನೇರುತ್ತಿದ್ದಂತೆಯೇ ಮುಂಬೈನೆಡೆ ಪ್ರಯಾಣ ಆರಂಭಿಸಿದ್ದಾನೆ. ಆದರೆ ಕೆಲವೇ ದೂರ ಕ್ರಮಿಸುತ್ತಿದ್ದಂತೆ ಅಚಾನಕ್ಕಾಗಿ ಆತ ನಿದ್ದೆಗೆ ಜಾರಿದ್ದಾನೆ.

ಡ್ರೈವಿಂಗ್ ವೇಳೆ ಆತ ಯಾವ ರೀತಿ ನಿದ್ದೆಗೆ ಜಾರಿದ್ದನೆಂದರೆ ಆತ ಕಾರು ಚಲಾಯಿಸುತ್ತಿದ್ದಾಗಲೇ ಸ್ಟೇರಿಂಗ್ ವ್ಹೀಲ್ ಮೇಲೆ ಮಲಗಿಕೊಂಡಿದ್ದಾನೆ. ಅದೃಷ್ಟವಶಾತ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಡ್ರೈವರ್ ನಿದ್ದೆಗೆ ಜಾರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಆಕೆ ಡ್ರೈವರ್ ಬಳಿ ಕಾರು ನಿಲ್ಲಿಸುವಂತೆ ಹೇಳಿ, ಆತನನ್ನು ಪಕ್ಕದ ಸೀಟಿಗೆ ಜಾರುವಂತೆ ಆದೇಶಿಸಿದ್ದಾಳೆ. ಬಳಿಕ ತಾನೇ ಕಾರು ಟ್ರೈವ್ ಮಾಡಿ ಮುಂಬೈ ತಲುಪಿದ್ದಾರೆ.

ಈ ಕುರಿತು ವಿಡಿಯೋ ಸಮೇತ ಟ್ವೀಟ್ ಮಾಡಿರುವ ತೇಜಸ್ವಿನಿ ಅವರು ಉಬರ್ ಅಧಿಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗುತ್ತಿದ್ದು, ಮಹಿಳೆಯ ಧೈರ್ಯಕ್ಕೆ ಎಲ್ಲರೂ ಭೇಷ್ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com