ಕೌಶಲ್ಯಪೂರ್ಣರಾಗಿದ್ದರೆ ಮಾಡುವ ಎಲ್ಲಾ ದಾಳಿಗಳು ಯುದ್ಧದಲ್ಲಿ ಕೊನೆಯಾಗುವುದಿಲ್ಲ: ಜ.ಎಂ ಎಂ ನಾರವಾನೆ 

ನಾವು ಕೌಶಲ್ಯಭರಿತನಾಗಿದ್ದರೆ ಮಾಡುವ ಎಲ್ಲಾ ದಾಳಿಗಳು ಯುದ್ಧದಲ್ಲಿ ಕೊನೆಗೊಳ್ಳುವುದಿಲ್ಲ ಎಂಬುದಕ್ಕೆ ಬಾಲಕೋಟ್ ವಾಯುದಾಳಿಯೇ ನಿದರ್ಶನ ಎಂದು ಭಾರತೀಯ ಸೇನಾ ಮುಖ್ಯಸ್ಥ ಜ.ಎಂ.ಎಂ ನಾರವಾನೆ ಹೇಳಿದ್ದಾರೆ.
ಜ.ಎ.ಎಂ. ನಾರವಾನೆ
ಜ.ಎ.ಎಂ. ನಾರವಾನೆ

ನವದೆಹಲಿ; ನಾವು ಕೌಶಲ್ಯಭರಿತರಾಗಿದ್ದರೆ ಮಾಡುವ ಎಲ್ಲಾ ದಾಳಿಗಳು ಯುದ್ಧದಲ್ಲಿ ಕೊನೆಗೊಳ್ಳುವುದಿಲ್ಲ ಎಂಬುದಕ್ಕೆ ಬಾಲಕೋಟ್ ವಾಯುದಾಳಿಯೇ ನಿದರ್ಶನ ಎಂದು ಭಾರತೀಯ ಸೇನಾ ಮುಖ್ಯಸ್ಥ ಜ.ಎಂ.ಎಂ ನಾರವಾನೆ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ಭೂ ಯುದ್ಧದ ಕುರಿತ ಕಾರ್ಯಾಗಾರವೊಂದರಲ್ಲಿ ಮಾತನಾಡಿ, ಭವಿಷ್ಯದಲ್ಲಿ ಭಾರತೀಯ ಸೇನೆ ಮಾಡುವ ಯುದ್ಧಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿದ್ದು ಯುದ್ಧಗಳು ಹೇಗೆ ನಡೆಯುತ್ತವೆ ಎಂಬುದು ಕೂಡ ಬದಲಾಗಲಿದೆ.  ಯುದ್ಧದ ಸ್ವರೂಪ ಬದಲಾಗದಿದ್ದರೂ ಅದರ ಪಾತ್ರ ಬದಲಾಗುತ್ತದೆ. ಬಾಲಕೋಟ್ ವಾಯುದಾಳಿ ನೋಡಿದರೆ ಯಾರೇ ಆಗಲಿ ಕೌಶಲ್ಯ ಹೊಂದಿದ್ದರೆ ನಾವು ಮಾಡುವ ಪ್ರತಿಯೊಂದು ದಾಳಿಯು ಯುದ್ಧದಲ್ಲಿ ಕೊನೆಗೊಳ್ಳುವುದಿಲ್ಲ ಎಂಬುದನ್ನು ಸಾರಿದೆ ಎಂದರು.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಯಾವುದೇ ದಾಳಿ ಮಾಡದೆ ತನ್ನ ಗುರಿಯನ್ನು ಸಾಧಿಸಿ ಹೇಗೆ ಪ್ರಾಬಲ್ಯ ಮೆರೆಯಿತು ಎಂಬುದನ್ನು ವಿವರಿಸಿದ ಅವರು,ಭಾರತ ಕೂಡ ಕ್ರಿಯಾತ್ಮಕ ದಾಳಿಗಳತ್ತ ಗಮನ ಹರಿಸುತ್ತಿದೆ. ಭಾರತದ ಪಶ್ಚಿಮ ಮತ್ತು ಉತ್ತರ ಗಡಿಗಳಲ್ಲಿ ಪ್ರಾಬಲ್ಯ ಮೆರೆಯಲು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿದ್ದೇವೆ. ಯುದ್ಧದಲ್ಲಿ ಚಲನ ಮತ್ತು ಚಲನರಹಿತ ಎರಡೂ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.

ಕಳೆದ ವರ್ಷ ಫೆಬ್ರವರಿ 26ರಂದು ಭಾರತ ವಾಯುಪಡೆ ಯುದ್ಧ ವಿಮಾನ ಪಾಕಿಸ್ತಾನದೊಳಗೆ ನುಗ್ಗಿ ಅಲ್ಲಿನ ಪಖ್ತುನ್ಖ್ವಾ ಪ್ರಾಂತ್ಯದ ಖೈಬರ್ ಎಂಬಲ್ಲಿ ಬಾಲಕೋಟ್ ಪಟ್ಟಣದಲ್ಲಿರುವ ಉಗ್ರರ ಶಿಬಿರ ತಾಣಗಳ ಮೇಲೆ ಬಾಂಬ್ ಹಾಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com