ನವದೆಹಲಿ: ವರ್ಗಾವಣೆ ಬಗ್ಗೆ ಫೆ. 17 ರಂದೇ ಮಾಹಿತಿ ನೀಡಲಾಗಿತ್ತು- ಜಸ್ಟೀಸ್ ಮುರಳೀಧರ್ 

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ  ದೆಹಲಿಯಿಂದ ವರ್ಗಾಯಿಸುವ ಮೊದಲು ತಮ್ಮಗೆ ಮಾಹಿತಿ ನೀಡಲಾಗಿತ್ತು ಎಂಬ ವಿಷಯವನ್ನು ನ್ಯಾಯಾಧೀಶ ಮುರಳೀಧರ್ ತಿಳಿಸಿದ್ದಾರೆ.
ಜಸ್ಟೀಸ್ ಮುರಳೀಧರ್
ಜಸ್ಟೀಸ್ ಮುರಳೀಧರ್

ನವದೆಹಲಿ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ  ದೆಹಲಿಯಿಂದ ವರ್ಗಾಯಿಸುವ ಮೊದಲು ತಮ್ಮಗೆ ಮಾಹಿತಿ ನೀಡಲಾಗಿತ್ತು ಎಂಬ ವಿಷಯವನ್ನು ನ್ಯಾಯಾಧೀಶ ಮುರಳೀಧರ್ ತಿಳಿಸಿದ್ದಾರೆ.

ಎಸ್. ಮುರಳಿಧರ್ ಅವರನ್ನು ಪಂಜಾಬ್ ಹಾಗೂ ಹೈಕೋರ್ಟ್  ನ್ಯಾಯಾಧೀಶರನ್ನಾಗಿ ರಾತ್ರೋರಾತ್ರಿ  ವರ್ಗಾವಣೆ ಮಾಡಿದದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.

ದೆಹಲಿ ಹೈಕೋರ್ಟ್ ನಲ್ಲಿ ಇಂದು  ನಡೆದ ಬೀಳ್ಗೊಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾ. ಮುರಳೀಧರ್ ವರ್ಗಾವಣೆಗೆ ಕೊಲಿಜಿಯಂ ಶಿಫಾರಸ್ಸು ಮಾಡಿರುವ ವಿಷಯವನ್ನು ಮುಖ್ಯ ನ್ಯಾಯಾಧೀಶ ಎಸ್ . ಎ. ಬೊಬ್ಡೆ ಫೆಬ್ರವರಿ 17ರಂದೇ ತಮ್ಮಗೆ ತಿಳಿಸಲಾಗಿತ್ತು. ಇದರಿಂದ ಯಾವುದೇ ತೊಂದರೆಯಾಗಲಿಲ್ಲ  ಎಂದು ಹೇಳಿದರು. 

ದೆಹಲಿ ಹೈಕೋರ್ಟ್ ನಿಂದ ಒಂದು ವೇಳೆ ವರ್ಗಾವಣೆಯಾದಲ್ಲಿ ಪಂಜಾಬ್ ಮತ್ತು ಹೈಕೋರ್ಟ್ ಗೆ ಹೋಗಲು ತಮ್ಮಗೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾಗಿ ಅವರು ತಿಳಿಸಿದರು.

ಫೆಬ್ರವರಿ 26 ರ ರಾತ್ರಿ  ಮುರಳೀಧರ್ ಅವರ ವರ್ಗಾವಣೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ವಿವಾದ ತಲೆದೋರಿತ್ತು.  ದ್ವೇಷಕಾರಿ ಭಾಷಣ ಆರೋಪದ ಮೇರೆಗೆ ಮೂವರು ಬಿಜೆಪಿ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸದ ದೆಹಲಿ ಪೊಲೀಸರನ್ನು ಮುರಳೀಧರ್ ನೇತೃತ್ವದ ನ್ಯಾಯಪೀಠ ತರಾಟಗೆ ತೆಗೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com