ಶಬರಿಮಲೆ ನಂತರ ಸಿಎಎ ಕುರಿತ ಮನವಿ ಅರ್ಜಿ ಆಲಿಸಲು ಸುಪ್ರೀಂಕೋರ್ಟ್ ನಿರ್ಧಾರ 

ಹೋಳಿ ರಜೆಯ ನಂತರ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮನವಿ ಅರ್ಜಿಯನ್ನು ಉಲ್ಲೇಖಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದ್ದು, ಶಬರಿಮಲೆ ಕುರಿತ ವಿಚಾರಣೆ ನಂತರ ಸಿಎಎ ಕುರಿತ ಮನವಿ ಅರ್ಜಿಗಳನ್ನು ಆಲಿಸುವುದಾಗಿ ಹೇಳಿದೆ
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ:  ಹೋಳಿ ರಜೆಯ ನಂತರ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮನವಿ ಅರ್ಜಿಯನ್ನು ಉಲ್ಲೇಖಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದ್ದು, ಶಬರಿಮಲೆ ಕುರಿತ ವಿಚಾರಣೆ ನಂತರ ಸಿಎಎ ಕುರಿತ ಮನವಿ ಅರ್ಜಿಗಳನ್ನು ಆಲಿಸುವುದಾಗಿ ಹೇಳಿದೆ

ಸಿಬಲ್ ಅವರು ಗುರುವಾರ ಸಿಎಎ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ಮೂರು ನ್ಯಾಯಾಧೀಶರ ಪೀಠದ ಮುಂದಿಟ್ಟು, ಇದರ ಶೀಘ್ರ ವಿಚಾರಣೆಗೆ ಕೋರಿದರು.

ನಾವು ಶಬರಿಮಲೆ ವಿಚಾರಣೆ ನಂತರ  ಮನವಿ ಅರ್ಜಿಯನ್ನು ಆಲಿಸುತ್ತೇವೆ. ಅದಕ್ಕೂ ಮುನ್ನ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ

ನಾವು ಒಂದು ವಾರದಲ್ಲಿ ವಿವರವಾದ ಉತ್ತರವನ್ನು ಸಲ್ಲಿಸುತ್ತೇವೆ ಎಂದು ಭಾರತ ಸರ್ಕಾರ ಪರ ಹಾಜರಾದ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com