ಕೋವಿಡ್-19: ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದು, ಇಟಲಿ, ದ.ಕೊರಿಯಾಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

ದೇಶದಲ್ಲಿ ಕೊರೋನಾವೈರಸ್ ಭಯದ ನಡುವೆ ಏರ್ ಇಂಡಿಯಾ ವಿಮಾನ ಸಂಸ್ಥೆ ಇಟಲಿ ಹಾಗೂ ದಕ್ಷಿಣ ಕೊರಿಯಾಗೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ಮಾರ್ಚ್ 25 ಹಾಗೂ  ಮಾರ್ಚ್ 28 ರವರೆಗೆ ರದ್ದುಗೊಳಿಸಿದೆ ಕೊರೋನಾವೈರಸ್  ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದುಪಡಿಸಿದ ನಂತರ ವಿಮಾನಯಾನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಭಯದ ನಡುವೆ ಏರ್ ಇಂಡಿಯಾ ವಿಮಾನ ಸಂಸ್ಥೆ ಇಟಲಿ ಹಾಗೂ ದಕ್ಷಿಣ ಕೊರಿಯಾಗೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ಮಾರ್ಚ್ 25 ಹಾಗೂ  ಮಾರ್ಚ್ 28 ರವರೆಗೆ ರದ್ದುಗೊಳಿಸಿದೆ ಕೊರೋನಾವೈರಸ್  ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದುಪಡಿಸಿದ ನಂತರ ವಿಮಾನಯಾನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಹುಟ್ಟಿದ ಈ ವೈರಸ್ 4,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾ ಜೊತೆಗೆ, ಇಟಲಿ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಈ ಮಾರಕ ವೈರಸ್ ಹಾವಳಿ ಅಧಿಕವಾಗಿದೆ. ಭಾರತದಲ್ಲಿ ಇದುವರೆಗೆ 68 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. 

ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ ಕೊರೋನಾವೈರಸ್ ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.

ಇನ್ನೊಂದೆಡೆ ಕೇಂದ್ರ ಸರ್ಕಾರದ ರಾಜತಾಂತ್ರಿಕರು, ಅಧಿಕಾರಿಗಳು, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಸಂಸ್ಥೆಯ ಉದ್ಯೋಗಿಗಳು ಹೊರತುಪಡಿಸಿ ಇತರರಿಗೆ ಪ್ರಸ್ತುತ ನೀಡಲಾಗಿರುವ ವೀಸಾ ಸಹ 2020 ರ ಏಪ್ರಿಲ್ 15 ರವರೆಗೆ ರದ್ದಾಗಿರುತ್ತದೆ. ಇದು 2020 ರ ಮಾರ್ಚ್ 13 ರಂದು ಭಾರತೀಯ ಕಾಲಮಾನ ಬೆಳಗ್ಗೆ5.30 ರಿಂದ ಜಾರಿಗೆ ಬರಲಿದೆ” ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ತುರ್ತು ಅಗತ್ಯಗಳಿಗಾಗಿ ಭಾರತಕ್ಕೆ ಬರಲೇಬೇಕಾಗುವ ಸಂದರ್ಭದಲ್ಲಿ ಅಂತಹ ಪ್ರಜೆಗಳು ತಮ್ಮ ಸಮೀಪದ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com