'ದೇಶದಲ್ಲಿ ಹಿಂದುತ್ವ ದ್ವೇಷದ ಸುನಾಮಿ ಎದ್ದಿದೆ': ಅಸದುದ್ದೀನ್ ಒವೈಸಿ 

ಇತ್ತೀಚಿನ ದೆಹಲಿ ಹಿಂಸಾಚಾರ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ಹಿಂದುತ್ವದ ದ್ವೇಷದ ಸುನಾಮಿ ಇದ್ದು ದೆಹಲಿ ಹಿಂಸಾಚಾರದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಅಸದುದ್ದೀನ್ ಒವೈಸಿ
ಅಸದುದ್ದೀನ್ ಒವೈಸಿ

ನವದೆಹಲಿ: ಇತ್ತೀಚಿನ ದೆಹಲಿ ಹಿಂಸಾಚಾರ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ಹಿಂದುತ್ವದ ದ್ವೇಷದ ಸುನಾಮಿ ಇದ್ದು ದೆಹಲಿ ಹಿಂಸಾಚಾರದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.


ಒವೈಸಿ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಪ್ರತಿಕ್ರಿಯೆ ಸಿಕ್ಕಿದ್ದು ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್ ಮತ್ತು ಕಿಶನ್ ರೆಡ್ಡಿ ಮರು ವಾಗ್ದಾಳಿ ನಡೆಸಿದರು. ಒವೈಸಿ ಹೇಳಿದ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಸ್ಪೀಕರ್ ಓಂ ಬಿರ್ಲಾ ಕೂಡ ಹೇಳಿದರು.


ಒವೈಸಿ ನಿನ್ನೆ ಲೋಕಸಭೆಯಲ್ಲಿ ಹೇಳಿದ್ದೇನು?:ದೇಶದ ಆತ್ಮವನ್ನು ಹಿಂದೂಗಳು ರಕ್ಷಿಸಬೇಕು, ಸುಮಾರು 1,100 ಮುಸಲ್ಮಾನರನ್ನು ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಕೋಮುದಂಗೆ ಎಂಬುದು ತಮಾಷೆಯಾಗಿದೆ, ದೆಹಲಿ ಹಿಂಸಾಚಾರ ಒಂದು ಪೂರ್ವಯೋಜಿತ ಹತ್ಯಾಕಾಂಡ ಎಂದು ಬಣ್ಣಿಸಿದರು.


ಸಂವಿಧಾನ ರಕ್ಷಿಸಲು ನಾವು ಸಾಯಲು ಬೇಕಾದರೂ ಸಿದ್ದರಿದ್ದೇವೆ. ಈ ರೀತಿಯ ಹತ್ಯಾಕಾಂಡ ಪುನರಾವರ್ತನೆಯಾಗಬಾರದು. ದೆಹಲಿ ಹಿಂಸಾಚಾರ ಕುರಿತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ನಿಸ್ಪಕ್ಷಪಾತ ತನಿಖೆ ನಡೆಸಬೇಕು. ಸರ್ವಪಕ್ಷಗಳ ತಂಡ ಹಿಂಸಾಚಾರ ಪೀಡಿತ ದೆಹಲಿಗೆ ಭೇಟಿ ನೀಡಿ ವಿಷಯ ತಿಳಿಯಬೇಕು ಎಂದು ಕೂಡ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com