ಕೊರೋನಾ ವೈರಸ್​ ಪ್ರತ್ಯೇಕಿಸಿದ ಜಗತ್ತಿನ 5ನೇ ರಾಷ್ಟ್ರ ಭಾರತ: WHO 

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕುರಿತು ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿಗಳು ಮಹತ್ತರ ಸಾಧನೆಗೈದಿದ್ದು, ಕೊರೋನಾ ವೈರಸ್​ ಪ್ರತ್ಯೇಕಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಕೊರೋನಾ ವೈರಸ್​ ಬೇರ್ಪಡಿಸಿದ ಜಗತ್ತಿನ 5ನೇ ರಾಷ್ಟ್ರ ಭಾರತ
ಕೊರೋನಾ ವೈರಸ್​ ಬೇರ್ಪಡಿಸಿದ ಜಗತ್ತಿನ 5ನೇ ರಾಷ್ಟ್ರ ಭಾರತ

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕುರಿತು ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿಗಳು ಮಹತ್ತರ ಸಾಧನೆಗೈದಿದ್ದು, ಕೊರೋನಾ ವೈರಸ್​ ಪ್ರತ್ಯೇಕಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ಬಗ್ಗೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದೆ. ಈ ಕುರಿತಂತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್ ಅವರು, ICMR ಮತ್ತು ಆರೋಗ್ಯ ಸಂಶೋಧನಾ ಇಲಾಖೆಗಳು ವೈರಸ್​ನ್ನು ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾಗಿದ್ದು ಈಗ ಭಾರತ ಸಂಶೋಧನಾ ಸಮುದಾಯದ ಭಾಗವಾಗಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ICMR ನ ಮುಖ್ಯಸ್ಥರು ಈ ಬಗ್ಗೆ ಮಾತನಾಡಿ.. ವೈರಸ್​ನ್ನು ಪ್ರತ್ಯೇಕಿಸುವುದು ನಿಜಕ್ಕೂ ಕಷ್ಟದ ಕೆಲಸ.. ಆದರೆ ಕೆಲ ದಿನಗಳ ಹಿಂದೆ ವೈರಸ್​ನ್ನು ಬೇರ್ಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.  ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ಇಟ್ಟ ದಿಟ್ಟ ಹೆಜ್ಜೆ ಬಗ್ಗೆ WHO ಕೂಡ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ಆ ಮೂಲಕ ಕೊರೊನಾ ವೈರಸ್​ನ್ನು ಬೇರ್ಪಡಿಸಿದ ಐದನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಹಿಂದೆ ಜಪಾನ್, ಥೈಲ್ಯಾಂಡ್, ಅಮೆರಿಕಾ ಮತ್ತು ಚೀನಾ ದೇಶಗಳು ಕೊರೋನಾ ವೈರಸ್​​ ಅನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದವು. ಇದೀಗ ಭಾರತವೂ ಇಂಥದ್ದೊಂದು ಸಾಧನೆಗೈಯ್ಯುವ ಮೂಲಕ ಕೊರೋನಾ ವಿರುದ್ಧ ಬಲಿಷ್ಠವಾಗಿ ಹೋರಾಡುತ್ತಿರುವ ದೇಶಗಳ ಪೈಕಿ ಒಂದಾಗಿದೆ.

ವೈರಸ್ ಪ್ರತ್ಯೇಕಿಸಿದ ಬಳಿಕ..?
ವೈರಸ್​ನ್ನು ಬೇರ್ಪಡಿಸಿದ ನಂತರ ಅದರ ಮೇಲೆ ಸಂಶೋಧನೆಗಳನ್ನು ನಡೆಸಿ, ಅದು ಹೇಗೆ ಕೆಲಸ ನಿರ್ವಹಿಸುತ್ತದೆ. ಎಷ್ಟು ಪರಿಣಾಮಕಾರಿಯಾಗಿರುತ್ತದೆ, ಮತ್ತು ಅದನ್ನು ನಿರ್ನಾಮ ಮಾಡುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಅಂತೆಯೇ ಅದನ್ನು ಕೊಲ್ಲಲು ಬೇಕಾದ ಔಷಧಿಯನ್ನು ಈ ಸಂಶೋಧನೆಯ ನಂತರ ತಯಾರಿಸಲು ಸಹಕಾರಿಯಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com