ಕೊರೋನಾ ವೈರಸ್ ಎಫೆಕ್ಟ್: ಸದ್ದೇ ಇಲ್ಲದೇ ಖಾಲಿಯಾಗುತ್ತಿದೆ 'ಶಹೀನ್ ಬಾಗ್'

ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ನೋಂದಣಿ (ಎನ್ ಪಿಆರ್) ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊರೋನಾ ವೈರಸ್ ಅಡ್ಡಿಯಾಗಿದ್ದು, ಪ್ರತಿಭಟನಾ ಸ್ಥಳದಿಂದ ಸದ್ದೇ ಇಲ್ಲದೇ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಾರೆ.
ಶಹೀನ್ ಬಾಗ್ ಪ್ರತಿಭಟನೆ
ಶಹೀನ್ ಬಾಗ್ ಪ್ರತಿಭಟನೆ

ನವದೆಹಲಿ: ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ನೋಂದಣಿ (ಎನ್ ಪಿಆರ್) ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊರೋನಾ ವೈರಸ್ ಅಡ್ಡಿಯಾಗಿದ್ದು, ಪ್ರತಿಭಟನಾ ಸ್ಥಳದಿಂದ ಸದ್ದೇ ಇಲ್ಲದೇ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಾರೆ.

ಹೌದು.. ದೆಹಲಿಯ ಶಹೀನ್ ಬಾಗ್ ನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳಾ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಆದರೆ ಇದೀಗ ದೇಶಾದ್ಯಂತ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಪ್ರತಿಭಟನಾಕಾರರು ಸದ್ದೇ ಇಲ್ಲದೇ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮನೆ ಸೇರಿ ಕೊಳ್ಳುತ್ತಿದ್ದಾರೆ. 

ನಿನ್ನೆಯಷ್ಟೇ ಪ್ರತಿಭಟನಾ ನಿರತರಿರುವ ಶಹೀನ್ ಬಾಗ್ ಗೆ ಆಗಮಿಸಿದ್ದ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ವೈರಸ್ ಕುರಿತಂತೆ ಚರ್ಚೆ ನಡೆಸಿದ್ದರು. ಅಲ್ಲದೆ ಪ್ರತಿಭಟನಾಕಾರರಿಗೆ ಕೊರೋನಾ ವೈರಸ್ ನ ಪರಿಣಾಮಗಳ ಕುರಿತು ತಿಳಿಹೇಳಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದರು. ಆದರೆ ಇದೀಗ ಏಕಾಏಕಿ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. 

ಇತ್ತೀಚೆಗಷ್ಟೇ ದೆಹಲಿ ಸರ್ಕಾರ ಮಾರ್ಚ್ 31ರವರೆಗೂ 50ಕ್ಕಿಂತ ಹೆಚ್ಚುಜನ ಸೇರುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಇದೂ ಕೂಡ ಪ್ರತಿಭಟನಾಕಾರರ ಸಂಖ್ಯೆ ಕ್ಷೀಣಿಸಲು ಕಾರಣ ಎಂದು ಹೇಳಲಾಗಿದೆ.

Delhi: Crowds thinning out at Shaheen Bagh protest site. Protest has been continuing here, against Citizenship Amendment Act and NRC-NPR, for the last 3 months. pic.twitter.com/XmM4Rh9cmW

— ANI (@ANI) March 18, 2020

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com