ಕೊರೋನಾ ಭೀತಿ ಲೆಕ್ಕಿಸದೆ, ರಾಮನವಮಿ ಮೇಳಕ್ಕೆ ಅನುಮತಿ ನೀಡಿದ ಯೋಗಿ

ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ  ಸರ್ಕಾರ  ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು  ಅನುಮತಿ  ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಯೋಧ್ಯೆ: ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ  ಸರ್ಕಾರ  ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು  ಅನುಮತಿ  ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ

ರಾಮನವಮಿ  ಮೇಳವು ಇದೇ  25ರಿಂದ ಮಂದಿನ ಏಪ್ರಿಲ್ 2ರವರೆಗೆ ನಡೆಯಲಿದ್ದು,ಲಕ್ಷಾಂತರ ಮಂದಿ ಭಕ್ತರು ಸೇರುವ ನಿರೀಕ್ಷೆಯಿದೆ.ಕೊರೋನ ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಸಭೆ, ಉತ್ಸವ ರದ್ದುಪಡಿಸಬೇಕು  ಎಂದು  ತಜ್ಞರು ಎಚ್ಚರಿಕೆ ನೀಡಿದ್ದರೂ ಆದಿತ್ಯನಾಥ್ ಸರಕಾರದ ಹಠದ ಕ್ರಮವು ಬಹಳ ಅಚ್ಚರಿ ತಂದಿದೆ

ಕೊರೋನ ಸೋಂಕು ಹರಡುವ  ಸಾಧ್ಯತೆಯ ಕಾರಣ  ಬೃಹತ್ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಅಯೋಧ್ಯೆಯ ಮುಖ್ಯ ವೈದ್ಯಾಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ

ಆ ಸಮಾರಂಭಕ್ಕೆ ಆಗಮಿಸುವ ಭಾರೀ ಜನಸಂಖ್ಯೆಯನ್ನು ವೈದ್ಯಕೀಯ ತಪಾಸಣೆ ಗುರಿಪಡಿಸಲು  ಬೇಕಾದ ಅಗತ್ಯ ಸಂಪನ್ಮೂಲ, ಸಿಬ್ಬಂದಿ ಇಲ್ಲ ಎಂದವರು ಹೇಳಿದ್ದರೂ ಸರ್ಕಾರ ಮಾತ್ರ  ಹಠಕ್ಕೆ ಬಿದ್ದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com