ಕೊರೋನಾ ಭೀತಿ: ದೆಹಲಿ ಆಸ್ಪತ್ರೆಯಲ್ಲಿ ಶಂಕಿತ ಸೋಂಕಿತ ಆತ್ಮಹತ್ಯೆಗೆ ಶರಣು!

ದೇಶಾದ್ಯಂತ ಕೊರೋನಾ ವೈರಸ್ ಕುರಿತಂತೆ ಸುದ್ದಿ ತಾರಕಕ್ಕೇರಿರುವಂತೆಯೇ ಇತ್ತ ದೆಹಲಿ ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಶಂಕಿತ ಕೊರೋನಾ ಸೋಂಕಿತರೊಬ್ಬರು ಮಹಡಿ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published: 19th March 2020 12:14 PM  |   Last Updated: 19th March 2020 12:14 PM   |  A+A-


Safdarjung hospital

ಸಫ್ಜರ್ ಜಂಗ್ ಆಸ್ಪತ್ರೆ

Posted By : Srinivasamurthy VN
Source : PTI

ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಕುರಿತಂತೆ ಸುದ್ದಿ ತಾರಕಕ್ಕೇರಿರುವಂತೆಯೇ ಇತ್ತ ದೆಹಲಿ ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಶಂಕಿತ ಕೊರೋನಾ ಸೋಂಕಿತರೊಬ್ಬರು ಮಹಡಿ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಹಿಂದೆ ವಿದೇಶಕ್ಕೆ ಹೋಗಿ ವಾಪಸ್ ಆಗಿದ್ದ ಈತನನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಆದರೆ ಈ ತಪಾಸಣೆಯ ವರದಿ ಇನ್ನೂ ಅಧಿಕಾರಿಗಳ ಕೈ ಸೇರಿರಲಿಲ್ಲ. ಹೀಗಾಗಿ ಈತನನ್ನು 14 ದಿನಗಳ ನಿರ್ಬಂಧಕ್ಕೆ ಒಳಪಡಿಸಲಾಗಿತ್ತು. ಆದರೆ ಇದಕ್ಕೆ ಶಂಕಿತ ಸೋಂಕಿತ ವ್ಯಕ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ, 

ಇದಾಗ್ಯೂ ಈತನನ್ನು ಬಲವಂತವಾಗಿ ಅಧಿಕಾರಿಗಳು ನಿರ್ಬಂಧಿತ ಕೊಠಡಿಗೆ ಕರೆದೊಯ್ದಿದ್ದರು. ಅದರಂತೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ 7ನೇ ಅಂತಸ್ತಿನಲ್ಲಿರುವ ಕೊರೋನಾ ವಿಶೇಷ ನಿರ್ಬಂಧಿತ ವಾರ್ಡ್ ನಲ್ಲಿ ಈತನನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಈತ ತನ್ನ ಕೊಠಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp