ನ್ಯಾಯಾಲಯಕ್ಕೂ ಅವರ ತಂತ್ರಗಾರಿಕೆ ತಿಳಿದಿದೆ, ನಾಳೆ ನಮಗೆ ನ್ಯಾಯದೊರೆಯಲಿದೆ: ನಿರ್ಭಯಾ ತಾಯಿ

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿರ್ಭಯ ದೋಷಿಗಳು ಹೂಡುತ್ತಿರುವ ತಂತ್ರಗಾರಿಕೆ ನ್ಯಾಯಾಲಯದ ಗಮನಕ್ಕೂ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ನಿರ್ಭಾಯ ತಾಯಿ ಆಶಾದೇವಿ ಹೇಳಿದ್ದಾರೆ.

Published: 19th March 2020 01:41 PM  |   Last Updated: 19th March 2020 01:41 PM   |  A+A-


Nirbhaya Mother

ನಿರ್ಭಯಾ ತಾಯಿ ಆಶಾದೇವಿ

Posted By : Srinivasamurthy VN
Source : ANI

ನವದೆಹಲಿ: ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿರ್ಭಯ ದೋಷಿಗಳು ಹೂಡುತ್ತಿರುವ ತಂತ್ರಗಾರಿಕೆ ನ್ಯಾಯಾಲಯದ ಗಮನಕ್ಕೂ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ನಿರ್ಭಾಯ ತಾಯಿ ಆಶಾದೇವಿ ಹೇಳಿದ್ದಾರೆ.

2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಾದೇವಿ ಅವರು, ನಿರ್ಭಯಾ ದೋಷಿಗಳಿಗೆ ನ್ಯಾಯಾಲಯ ಎಲ್ಲ ರೀತಿಯ ಅವಕಾಶವನ್ನೂ ನೀಡಿತು. ಆದರೆ ದೋಷಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲ ರೀತಿಯ ತಂತ್ರಗಾರಿಕೆ ಬಳಸಿದರು. ದೋಷಿಗಳ ಈ ತಂತ್ರಗಾರಿಕೆ ಇದೀಗ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp