ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸುತ್ತೇನೆ: ಸಿಎಂ ಕಮಲ್ ನಾಥ್

ಮಧ್ಯಪ್ರದೇಶದ ರೆಬೆಲ್ ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬೆನ್ನಲ್ಲೇ ಸಿಎಂ ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.
ಸಿಎಂ ಕಮಲ್ ನಾಥ್
ಸಿಎಂ ಕಮಲ್ ನಾಥ್

ಭೋಪಾಲ್: ಮಧ್ಯಪ್ರದೇಶದ ರೆಬೆಲ್ ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬೆನ್ನಲ್ಲೇ ಸಿಎಂ ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಮಧ್ಯ ಪ್ರದೇಶ ರಾಜ್ಯಪಾಲ ಪ್ರಜಾಪತಿ ಅವರು ಕಾಂಗ್ರೆಸ್ ಪಕ್ಷದ 16 ಮಂದಿ ರೆಬೆಲ್ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದ್ದರು. ಆ ಮೂಲಕ ಸಿಎಂ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಅಲ್ಪ ಮತಕ್ಕೆ ಕುಸಿದಿತ್ತು. ಈ ಹಿನ್ನಲೆಯಲ್ಲಿ ಇಂದು ವಿಶ್ವಾಸಮತಕ್ಕೂ ಮೊದಲೇ ಸಿಎಂ ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಮಲ್ ನಾಥ್ ಅವರು, ಇಂದು ರಾಜ್ಯಪಾಲ ಲಾಲ್ ಜೀ ಟಂಡನ್ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು ಜನರಿಂದ ಆಯ್ಕೆಯಾದ ಸರ್ಕಾರವನ್ನು ಹಣಬಲ ಮತ್ತು ತೋಳ್ಬಲದಿಂದ ಬಿಜೆಪಿ ಉರುಳಿಸುವ ಕೆಲಸ ಮಾಡಿದೆ. ಮಧ್ಯ ಪ್ರದೇಶವನ್ನು ಸೋಲಿಸಿ ತಾನು ಗೆಲ್ಲಲು ಬಿಜೆಪಿ ಮುಂದಾಗಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿದ ಮೊದಲ ದಿನದಿಂದಲೂ ಬಿಜೆಪಿ ನಮ್ಮ ವಿರುದ್ಧ ಸಂಚು ಹೂಡಿದೆ. ಬಿಜೆಪಿ ಮಧ್ಯಪ್ರದೇಶದ ಜನರಿಗೆ ದ್ರೋಹ ಬಗೆದಿದೆ. ಕಳೆದ 15 ತಿಂಗಳುಗಳಲ್ಲಿ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿಗೆ 15 ವರ್ಷಗಳು ದೊರೆತಿದ್ದವು, ಆದರೆ ನನಗೆ 15 ತಿಂಗಳುಗಳಷ್ಟೇ ದೊರೆತವು. ಈ ಅವಧಿಯಲ್ಲಿ ಬಿಜೆಪಿ ಹೂಡಿದ ಸಂಚು ಏನೆಂಬುದು ಮಧ್ಯಪ್ರದೇಶದ ಜನತೆಗೆ ತಿಳಿದಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿದಿದೆ. ಅವರೇ ನ್ಯಾಯ ಒದಗಿಸಿಕೊಡಲಿದ್ದಾರೆ ಎಂದು ಕಮಲ್ ನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com