ಹಿಂದೂ ಮಹಾಸಾಗರ ಪ್ರದೇಶದಲ್ಲಿ ನೀರೊಳಗಿನ ಡ್ರೋನ್ ನಿಯೋಜಿಸಿದ ಚೀನಾ, ಸಮುದ್ರ ಗಣಿಗಾರಿಕೆ ಮೇಲೆ ಕಣ್ಣು! 

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ನೀರೊಳಗೆ ಸಂಚರಿಸುವ 12 ಡ್ರೋನ್ ಗಳನ್ನು ನಿಯೋಜಿಸಿದ್ದು ಸಮುದ್ರದ ಆಳದಲ್ಲಿ ಸಮೀಕ್ಷೆ ನಡೆಸಲು ಪ್ರಾರಂಭಿಸಿದೆ.IOR 
ನೀರೊಳಗಿನ ಡ್ರೋನ್ ನಿಯೋಜಿಸಿದ ಚೀನಾ
ನೀರೊಳಗಿನ ಡ್ರೋನ್ ನಿಯೋಜಿಸಿದ ಚೀನಾ

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ನೀರೊಳಗೆ ಸಂಚರಿಸುವ 12 ಡ್ರೋನ್ ಗಳನ್ನು ನಿಯೋಜಿಸಿದ್ದು ಸಮುದ್ರದ ಆಳದಲ್ಲಿ ಸಮೀಕ್ಷೆ ನಡೆಸಲು ಪ್ರಾರಂಭಿಸಿದೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಫೋರ್ಬ್ಸ್ ನ ವರದಿಯ ಆಧಾರದಲ್ಲಿ ಪ್ರಕಟಿಸಿರುವ ಲೇಖನದ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ಭಾರತವೂ ಚೀನಾದ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 

ಚೀನಾ ನೀರೊಳಗೆ ಡ್ರೋಣ್ ಗಳನ್ನು ನಿಯೋಜನೆ ಮಾಡಿ ಸಮೀಕ್ಷೆ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ತೋರಿದರೂ ಕಡಲ ಆಳದಲ್ಲಿ ಜಲಾಂತರ್ಗಾಮಿ ಹಾಗೂ ಜಲಾಂತರ್ಗಾಮಿ ನಿರೋಧಕ ಯುದ್ಧ ಕಾರ್ಯಾಚರಣೆ ದೃಷ್ಟಿಯಿಂದ ಚೀನಾ ನಡೆ ಅನುಮಾನ, ಆತಂಕಗಳಿಗೆ ಕಾರಣವಾಗಿದೆ. 

ಡಿಸೆಂಬರ್ ನ ಮಧ್ಯದಿಂದಲೇ ಚೀನಾ ಹಿಂದೂ ಮಹಾಸಾಗರದಲ್ಲಿ ’ಸೀ ವಿಂಗ್’ ಡ್ರೋಣ್ ಗಳನ್ನು ನಿಯೋಜಿಸಿತ್ತು. ಈ ಡ್ರೋಣ್ ಗಳು ಹಲವು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿ ಈ ವರೆಗೂ 3,400 ವೀಕ್ಷಣೆಗಳನ್ನು ಮಾಡಿದೆ ಎಂದು ಚೀನಾದ ನೈಸರ್ಗಿಕ ಸಂಪನ್ಮೂಲಗಳ ಇಲಾಖೆ ಹೇಳಿರುವುದನ್ನು ಫೋರ್ಬ್ಸ್ ವರದಿ ಮಾಡಿದೆ.

ಈ ಬಗ್ಗೆ ಭಾರತೀಯ ನೌಕಾಪಡೆ ಪ್ರತಿಕ್ರಿಯೆ ನೀಡಿದ್ದು ಫೋರ್ಬ್ಸ್ ನ ವರದಿಯನ್ನು ದೃಢಪಡಿಸುವುದು ಸಾಧ್ಯವಿಲ್ಲ. ಆದರೆ ಚೀನಾದ ಸಂಶೋಧನಾ ಹಡಗುಗಳು ಹಿಂದೂಮಹಾಸಾರದಲ್ಲಿ ಸಂಚರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com